ಮಹದೇವಪುರ: ಜಾಹೀರಾತು ಫಲಕ ಕಾಣಬೇಕು ಎಂಬ ಸಲುವಾಗಿ ಹೆದ್ದಾರಿ ಬದಿಯಲ್ಲಿನ ಮರಗಳ ಕೊಂಬೆಗಳನ್ನು ಅಕ್ರಮವಾಗಿ ಕಡಿದು ಹಾಕಿರುವವರ ವಿರುದ್ಧ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ75 ರ ಆವಲಹಳ್ಳಿ ಸಮೀಪ ಸರ್ವಿಸಸ್ ರಸ್ತೆಯ ಬದಿಯಲ್ಲಿ ಬೆಳೆದು ನಿಂತಿದ್ದ 50 ಕ್ಕೂ ಹೆಚ್ಚು ಮರಗಳ ರೆಂಬೆ ಕೊಂಬೆಗಳನ್ನು ರಾತ್ರೋರಾತ್ರಿ ಅಕ್ರಮವಾಗಿ ಕಡಿದು ಹಾಕಲಾಗಿದೆ.
ಈ ಸಂಬಂಧ ಆವಲಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಕೆ.ಆರ್.ಪುರದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಅರಣ್ಯಾಧಿಕಾರಿಗಳು ಕಿತ್ತಗನೂರಿನ ಶ್ರೀನಿವಾಸ್, ಚಿನ್ನಾಗೇನಹಳ್ಳಿಯ ಮುನಿರಾಮ ಹಾಗೂ ಹೊಸಕೋಟೆಯ ನಬೀದ್ ಮೇಲೆ ದೂರು ದಾಖಲಿಸಿಕೊಂಡು ಕತ್ತರಿಸಲಾಗಿದ್ದ ಸುಮಾರು ಎರಡು ಟನ್ ಸೌದೆಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಕ್ರಮವಾಗಿ ಮರಗಳನ್ನು ಕಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಭಾರಿ ದಂಡ ವಿಧಿಸಬೇಕು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ, ಇಂತಹ ಚಟುವಟಿಕೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಪರಿಸರ ಪ್ರೇಮಿ ಹಾಗೂ ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯಾದ್ಯಕ್ಷ ಮುನಿಮಾರಪ್ಪ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಸಂಬಂಧ ಪಟ್ಟ ಎಂಜಿನಿಯರ್ ಅಮಾನತ್ತಿಗೆ ಸಿಎಂ ಆದೇಶ
