ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾಜ್ಯದಲ್ಲಿ ಜೂನ್ ತಿಂಗಳ ಒಳಗಾಗಿ ಜಿಬಿಎ ಚುನಾವಣೆ ನಡೆಸಬೇಕಾಗಿತ್ತು, ಆದರೆ ಕೋರ್ಟ್ ಆದೇಶ ಇದ್ದರೂ ಕೂಡ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಜಿಬಿಎ ಚುನಾವಣೆಯನ್ನು ಮುಂದುವಡುತ್ತಿದೆ ಎಂದು ಜೆಡಿಎಸ್ ಕಾನೂನು ಘಟಕದಿಂದ ದೂರು ನೀಡಲಾಗಿದೆ.
ಹೌದು, ಜಿಬಿಎ ಚುನಾವಣೆ ನಡೆಸಲು ಹಣ ಇಲ್ಲ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿಗೆ ಉತ್ತರ ನೀಡಿದ ಬೆನ್ನೆಲೆ ಇದೀಗ ಜಿಬಿಎ ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ಕಾನೂನು ಘಟಕದಿಂದ ದೂರು ನೀಡಲಾಗಿದೆ.
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ ರಂಗನಾಥ್ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದ್ದು, ಜಿಬಿಎ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೇ ತಿಂಗಳಲ್ಲಿ ಡಿಕೆಶಿ CM ಆಗೋದು ಫಿಕ್ಸ್: ಶಾಸಕ ಇಕ್ಬಾಲ್ ಹುಸೈನ್
ನಂತರ ಮಾತನಾಡಿದ ಅವರು , ಕೋರ್ಟ್ ಆದೇಶ ಇದ್ದರೂ ಕೂಡಾ ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಜಿಬಿಎ ಚುನಾವಣೆ ಮುಂದೂಡಿಕೆ ಮಾಡುತ್ತಿದೆ. ಬೆಂಗಳೂರು ಜನರ ಕಷ್ಟ ಕೇಳುವವರಿಲ್ಲ. ಸ್ಥಳೀಯ ಸಂಸ್ಥೆಯಲ್ಲಿ ಜನಪ್ರತಿನಿಧಿಗಳು ಇಲ್ಲದೇ ಅನಾನುಕೂಲಗಳು ಉಂಟಾಗುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಜಿಬಿಎ ಚುನಾವಣೆ ನಡೆಸಬೇಕು. ಈಗಾಗಲೇ ಮುಖ್ಯ ಚುನಾವಣಾ ಆಯುಕ್ತರಿಗೂ ದೂರು ನೀಡಲಾಗಿದೆ. ಈಗ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಈ ಬಗ್ಗೆ ರಾಷ್ಟಪತಿಗಳಿಗೆ ರಾಜ್ಯಪಾಲರು ವರದಿ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.
