ಬೆಂಗಳೂರು: ಬೆಂಗಳೂರು ನಗರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ತಾನು ಪ್ರೀತಿಸುತ್ತಿದ್ದ ಯುವಕ ಬೇರೆ ಒಬ್ಬರ ಪ್ರೀತಿಯಲ್ಲಿ ಬಿದ್ದಿದ್ದ ಎಂಬ ಕಾರಣಕ್ಕೆ ತನ್ನ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊ*ಲೆ ಮಾಡಿರುವ ಘಟನೆ ಇಡೀ ಬೆಂಗಳೂರು ಜನರನ ಬೆಚ್ಚಿ ಬೆಳಿಸುವಂತೆ ಇದೆ. ಇನ್ನು ಮಗನನ್ನು ಕಳೆದುಕೊಂಡ ಅವರ ತಂದೆ-ತಾಯಿ ಆಸ್ಪತ್ರೆ ಬಳಿ ಕಣ್ಣೀರು ಹಾಕುತ್ತಿದ್ದಾರೆ.
ಹೌದು, ನನ್ನನ್ನು ಬಿಟ್ಟು ಬೇರೆಯವರ ಸಾಹವಸ ಮಾಡಿದ್ದಾನೆ ಎಂಬ ಕಾರಣಕ್ಕೆ ತಾನು ಪ್ರೀತಿಸಿದ್ದ ಯುವಕನನ್ನು ಕೈಕಾಲು ಕಟ್ಟಿ ಸುಟ್ಟಿರುವ ಕೇಸ್ ಗೆ ಸಂಬಂಧಿಸಿದಂತೆ ಕಿರಣ್ ಎನ್ನುವ ಯುವಕನು ಐಸುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನು ಮಗ ಇನ್ನಿಲ್ಲ ಎಂಬ ಸುದ್ದಿಯನ್ನ ತಿಳಿಯುತ್ತಿದಂತೆ ತಂದೆ-ತಾಯಿ ಹಾಗೂ ಸಂಬಂಧಿಕರು ಕಣ್ಣೀರಿನ ದಾರಿಯ ಹರಿಸಿದ್ದಾರೆ. ಇದನ್ನೂ ಓದಿ: ಗೂಗಲ್ ನಲ್ಲಿ ಸರ್ಚ್ ಮಾಡಿ ಪ್ರಿಯತಮನ ಕೊ*ಲೆಗೆ ಸ್ಕೆಚ್!
ಕಿರಣ್ ತನ್ನ ತಂದೆ-ತಾಯಿಗೆ ಏಕೈಕ ಮಗನಾಗಿದ್ದನು. “ಈ ರೀತಿ ಸುಟ್ಟು ಹಾಕೋದು ಎಷ್ಟು ಸರಿ? ಈಗ ನಮ್ಮ ಮಗನಿಲ್ಲದೆ ನಾವು ಹೇಗೆ ಬದುಕಬೇಕು?” ಎಂದು ಪೋಷಕರು ದುಃಖದಿಂದ ಕಂಗಾಲಾಗಿದ್ದಾರೆ. ಆರಂಭದಲ್ಲಿ ಕಿರಣ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದರಿಂದ, ಯುವಕನ ತಾಯಿ ಸ್ವಲ್ಪ ಧೈರ್ಯದಲ್ಲಿದ್ದರು. ಆದರೆ ಮಗ ಮೃತ ಪಟ್ಟಿದ್ದಾನೆ ಎಂಬ ಸುದ್ದಿ ತಿಳಿದ ತಕ್ಷಣವೇ ಅವರು ಮನೋವ್ಯಥೆಯಿಂದ ಕುಗ್ಗಿಹೋಗಿದ್ದಾರೆ.
ಈ ಘಟನೆ ಕುಟುಂಬವನ್ನು ಮಾತ್ರವಲ್ಲ, ಸಂಬಂಧಿಕರು ಹಾಗೂ ಸ್ಥಳೀಯರನ್ನು ಸಹ ಆಘಾತಕ್ಕೀಡು ಮಾಡಿದೆ.
