Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವೈದ್ಯರ ನಿರ್ಲಕ್ಷ್ಯ-ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿ ಸಾವು
  • Bangalore
  • Crime
  • State

ವೈದ್ಯರ ನಿರ್ಲಕ್ಷ್ಯ-ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿ ಸಾವು

Praja Vahini April 22, 2026
WhatsApp Image 2026-04-22 at 14.31.57
Spread the love

ಬೆಂಗಳೂರು: ಮನುಷ್ಯನಿಗೆ ಯಾವುದೇ ಒಂದು ಆರೋಗ್ಯ ಸಮಸ್ಯೆ ಬಂದರೆ ಅವರು ತಕ್ಷಣವೇ ವೈದ್ಯರ ಬಳಿ ಹೋಗಿ ತಮಗೆ ಬಂದಿರುವಂತಹ ಸಮಸ್ಯೆಗಳ ಬಗ್ಗೆ ವೈದ್ಯರ ಮುಂದೆ ಯಾವುದೇ ನಾಚಿಕೆ ಇಲ್ಲದೆ ಆರೋಗ್ಯ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.

ಇನ್ನು ರೋಗಿಗಳು ಯಾವ ಸಮಸ್ಯೆಯಿಂದ ಬಳಲಿದರು ಕೂಡ ಅವರನ್ನು ಗುಣಮುಖರನ್ನಾಗಿ ಮಾಡುವ ಶಕ್ತಿ ವೈದ್ಯರಲ್ಲಿರುತ್ತದೆ. ಆದ್ದರಿಂದ ವೈದ್ಯರನ್ನ ದೇವರ ಸಮಾನ ಎಂದು ಹೇಳಲಾಗುತ್ತದೆ. ಆದರೆ ವೈದ್ಯರ ನಿರ್ಲಕ್ಷದಿಂದ ಇದೀಗ ವ್ಯಕ್ತಿ ಒಬ್ಬ ಪ್ರಾಣ ಕಳೆದುಕೊಂಡಿರುವ ಘಟನೆಯು ನಡೆದಿದೆ.

ಹೌದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ರೋಗಿಯೊಬ್ಬರು ತಮ್ಮ ಪ್ರಾಣ ಕಳೆದುಕೊಂಡು ಅವರ ಕುಟುಂಬ ಇದೀಗ ಬೀದಿಪಾಲಾಗಿದೆ. ಡಾಕ್ಟರ್​​ ನಿರ್ಲಕ್ಷ್ಯಕ್ಕೆ ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿದ್ದಾನೆ ಎಂದು ದೂರಲಾಗಿದ್ದು, ಇದು ಇಡೀ ವೈದ್ಯ ಲೋಕವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಎಂಬ ಮಾತುಗಳು ಕೇಳಿಬಂದಿವೆ.

45 ವರ್ಷದ ಶಾ ನವಾಜ್ ಎಂಬ ವ್ಯಕ್ತಿ ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆ ಎಮರ್ಜೆನ್ಸಿ ವಿಭಾಗಕ್ಕೆ ಅವರನ್ನು ಎಡ್ಮಿಟ್​​ ಮಾಡಿಕೊಳ್ಳಲಾಗಿತ್ತು. ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬಳಿಕ ಚಿಕಿತ್ಸೆಗಾಗಿ ಆತನ ಮರ್ಮಾಂಗವನ್ನು ಆಸ್ಪತ್ರೆ ಸಿಬ್ಬಂದಿ ಕೊಯ್ದಿದ್ದರು. ಅದಾದ ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ತಿಳಿಸಿದ್ದರು. ಆದರೆ ಗಾಯ ಇನ್ನೂ ಆರಿಲ್ಲ ಎಂದು ಈ ವೇಳೆ ಸರ್ಜರಿ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಆಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಕೊನೆಗೆ ಕೊಯ್ದಿದ್ದ ಮರ್ಮಾಂಗಕ್ಕೆ ಹೊಲಿಗೆ ಕೂಡ ಮಾಡದೇ ಸಿಬ್ಬಂದಿ ಕಳುಹಿಸಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕಾಂಗ್ರೆಸ್‌ 2 ತಿಂಗಳ ಗ್ರಹಲಕ್ಷ್ಮಿ ಹಣವನ್ನ ಉಪಚುನಾವಣೆ ಬಳಸಿದೆ: ಬಿವೈವಿ ಆರೋಪ

ಇನ್ನು ಶಾ ನವಾಜ್ ಪತ್ನಿ ಆಸ್ಪತ್ರೆ ಸಿಬ್ಬಂದಿಗಳನ್ನ ಎಷ್ಟೇ ಅಂಗಲಾಚಿದರೂ ಮತ್ತೆ ಅಡ್ಮಿಟ್ ಮಾಡಿಕೊಳ್ಳದ ಕಾರಣ 3 ದಿನ ಫುಟ್​​ಪಾತ್​​ನಲ್ಲೇ ರೋಗಿ ಪತಿಯನ್ನು ಮಡದಿ ಇಟ್ಟುಕೊಂಡಿದ್ದರು. ಮರ್ಮಾಂಗದಿಂದ ರಕ್ತ ಸುರಿಯುತ್ತಲೇ ಇದ್ದರೂ ಹೊಲಿಗೆ ಕೂಡ ಮಾಡದೇ ನಿರ್ಲಕ್ಷ್ಯ ತೋರಿದ ಕಾರಣ ಕೊನೆಗೆ ಮರ್ಮಾಂಗದ ಭಾದೆ ತಾಳಲಾರದೆ ನವಾಜ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನವಾಜ್​​ರನ್ನೇ ನಂಬಿಕೊಂಡಿದ್ದ ಹೆಂಡತಿ ಹಾಗೂ ನಾಲ್ಕು ಮಂದಿ ಮಕ್ಕಳು ಘಟನೆಯಿಂದ ಬೀದಿಗೆ ಬಿದ್ದಿದ್ದು, ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಹಾಗಾದರೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

About the Author

Praja Vahini

Editor

View All Posts

Spread the love

Post navigation

Previous: ಕಾಂಗ್ರೆಸ್‌ 2 ತಿಂಗಳ ಗ್ರಹಲಕ್ಷ್ಮಿ ಹಣವನ್ನ ಉಪಚುನಾವಣೆ ಬಳಸಿದೆ: ಬಿವೈವಿ ಆರೋಪ
Next: lover ಗೆ ಬೆಂಕಿ ಹಚ್ಚಿ ಹತ್ಯೆ ಕೇಸ್; ಆಸ್ಪತ್ರೆ ಬಳಿ ಹೆತ್ತವರ ಕಣ್ಣೀರು!

Views:

25

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.