ಬೆಂಗಳೂರು: ಸುಖ ನಿದ್ದೆಯಲ್ಲಿ ಜಾರಿದ್ದ ಮೊಹಮ್ಮದ್ ನಲಪಾಡ್ ಅವರಿಗೆ ಇಡಿ ಅಧಿಕಾರಿಗಳು ನಿನ್ನೆ (ಸೋಮವಾರ ಏಪ್ರಿಲ್ 20) ರಂದು ಬೆಳ್ಳಂಬೆಳಗ್ಗೆ 6:30ಕ್ಕೆ ಧೀಡಿರ್ ಎಂಟ್ರಿ ಕೊಟ್ಟು ದಾಳಿ ನಡೆಸಿದ್ದಾರೆ.
ಹೌದು, ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ನ ಯುವ ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ಇಡಿ ಅಧಿಕಾರಿಗಳು ದಿಢೀರ್ ಶಾಕ್ ನೀಡಿ ಸುಮಾರು 21 ಗಂಟೆಗಳ ಕಾಲ ಇಡೀ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬೆಂಗಳೂರಿನ ಅಶೋಕನಗರದ ನಲಪಾಡ್ ಮನೆಯಲ್ಲಿ ಸತತ 21 ಗಂಟೆಗಳ ಸುದೀರ್ಘ ಶೋಧ ಕಾರ್ಯವನ್ನು ಇಡಿ ನಡೆಸಿದೆ. ಇದನ್ನೂ ಓದಿ: ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ
ಇನ್ನು 14 ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ಆದರೆ, ಅಂದಿನ ಕೆಲ ದಾಖಲೆಗಳು ಸದ್ಯಕ್ಕೆ ಸಿಕ್ಕಿಲ್ಲ. ನಲಪಾಡ್ ವಿದೇಶಿ ವ್ಯವಹಾರ, ಹೂಡಿಕೆ ಕುರಿತು ದಾಖಲೆ ಕಲೆಹಾಕಿದ್ದಾರೆ. ಮಹತ್ವದ ದಾಖಲೆಗಳು, ಡಿಜಿಟಲ್ ಡಾಕ್ಯುಮೆಂಟ್ ಅನ್ನು ಇಡಿ ವಶಕ್ಕೆ ಪಡೆದಿದೆ. ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಅಧಿಕಾರಿಗಳು ತಿಳಿಸಿದ್ದಾರೆ.
