ಚಿಕ್ಕಬಳ್ಳಾಪುರ: ಕಳೆದ ಹಲವಾರು ದಿನಗಳಿಂದ ಇರಾನ್-ಇಸ್ರೇಲ್ ಯುದ್ಧ ಕಾರಣ ಇಡೀ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಗ್ಯಾಸ್ ಬೆಲೆ ಕೂಡ ಏರಿಕೆಯಾಗುತ್ತಿದೆ. ಗ್ಯಾಸ್ ಬೆಲೆ ಏರಿಕೆ ಆಗಿರುವುದರಿಂದ ಕೆಲವು ಹೋಟೆಲ್ಗಳನ್ನು ಮುಚ್ಚಲಾಗಿದ್ದು ಇದರಿಂದ ರೈತರು ತಾವು ಬೆಳೆದ ಬೆಳಿಗ್ಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಎದುರಾಗಿದ್ದಾರೆ. ರೈತರು ಬೆಳೆದ ತರಕಾರಿಗಳನ್ನು ಖರೀದಿ ಮಾಡಲು ಗ್ರಾಹಕರೇ ಇಲ್ಲದಂತಾಗಿದ್ದು, ರೈತರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಇರಾನ್, ಇಸ್ರೇಲ್ ಯುದ್ಧದ ಪರಿಣಾಮವು ಇದೀಗ ಕರ್ನಾಟಕ ರಾಜ್ಯದಲ್ಲಿರುವ ರೈತರಿಗೂ ತಟ್ಟಿದೆ. ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆಸಿಗದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸಾಕು, ತರಕಾರಿಗಳ ಬೆಲೆ ಹೆಚ್ಚಿರುತ್ತದೆ. ಆದರೆ ಈ ಬಾರಿ ಇರಾನ್. ಇಸ್ರೇಲ್ ಯುದ್ಧದ ಪರಿಣಾಮ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಇದನ್ನೂ ಓದಿ: ಬೈ ಎಲೆಕ್ಷನ್; ಅಭ್ಯರ್ಥಿಗಳ ಗೆಲುವಿಗಾಗಿ ಸಿಎಂ ಸಿದ್ದು ಟೆಂಪಲ್ ರನ್
1 ಕೆಜಿ ಟೊಮೆಟೊ 10-12 ರೂಪಾಯಿ, ಕ್ಯಾರೆಟ್ – 8 ರಿಂದ 10 ರೂಪಾಯಿ, ಸೌತೆಕಾಯಿ ಮೂಟೆ 200-250 ರೂಪಾಯಿ, ಮೂಲಂಗಿ 5 ರಿಂದ 6 ರೂಪಾಯಿ, ನವಕೋಲು ಸಹ 5 ರಿಂದ 6 ರೂಪಾಯಿ, ಕಳೆದ ವರ್ಷ ಇದೇ ಸಮಯದಲ್ಲಿ 100 ರಿಂದ 120 ರೂಪಾಯಿ ಇದ್ದ ಬೀನ್ಸ್ ಬೆಲೆ ಇಂದ 30-40 ರೂಪಾಯಿಗೆ ಮಾರಾಟವಾಗಿದೆ. ರೈತರಿಗೆ ಭಾರೀ ನಷ್ಟ ಸಂಭವಿಸುತ್ತಿದೆ.
