ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಸಿನಿಮಾ ಮಾಡುವುದನ್ನು ನಿಲ್ಲಿಸಿ ಇದೀಗ ರಾಜಕೀಯ ರಂಗಕ್ಕೆ ಎಂಟ್ರಿ ನೀಡಿ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಾರೆ.
ಹೌದು, ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ವಿರುದ್ಧ ಈಗಾಗಲೇ ಹಲವಾರು ಆರೋಪಗಳ ಕುತಂತ್ರವೇ ನಡೆಯುತ್ತಿದ್ದರು ಇದೀಗ ರಾಜಕೀಯ ರಂಗಕ್ಕೆ ಎಂಟ್ರಿ ನೀಡಿರುವುದು ಎಲ್ಲರಲಿ ಕುತೂಹಲ ಮೂಡಿಸಿದೆ.
ಇನ್ನು ತಮಿಳುನಾಡು ವಿಧಾನಸಭಾ ಚುನಾವಣೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನನ್ನ ಸಿನಿಮಾ ಕರಿಯರ್ ನಲ್ಲೂ ಕೂಡ ಹಲವರು ನನ್ನ ವಿರುದ್ಧ ಕುತಂತ್ರ ನಡೆಸಿದರು. ಅದಾದ ಬಳಿಕ ಇದೀಗ ರಾಜಕೀಯದಲ್ಲೂ ಕೂಡ ಹಲವು ಪಕ್ಷಗಳು ಒಂದಾಗಿ ನನ್ನ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮುತ್ತಪ್ಪ ರೈ ಮಗ ರಿಕ್ಕಿ ರೈಗೆ ಎದುರಾಯಿತು ಸಂಕಷ್ಟ
ತಮ್ಮ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆಯ ವಿಳಂಬದ ಬಗ್ಗೆ ಗಂಭೀರವಾಗಿ ಮಾತನಾಡಿದ ವಿಜಯ್, ಇದೊಂದು ಸಾಮಾನ್ಯ ಘಟನೆ ಅಲ್ಲ, ಬದಲಾಗಿ ದೊಡ್ಡ ರಾಜಕೀಯ ಷಡ್ಯಂತ್ರದ ಭಾಗ ಎಂದು ಆರೋಪಿಸಿದರು. “ನನ್ನ ವಿರುದ್ಧ ಎಲ್ಲಾ ಪಕ್ಷಗಳೂ ಒಂದಾಗಿವೆ ಎಂಬುದನ್ನು ಹೇಳಬೇಕಾಗಿಲ್ಲ. 40ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಕರೂರ್ ಕಾಲ್ತುಳಿತದ ಘಟನೆ ಹಾಗೂ ‘ಜನ ನಾಯಕನ್’ ಸಿನಿಮಾ ಬಿಡುಗಡೆಯನ್ನು ತಡೆಹಿಡಿದಿರುವುದು ಇದಕ್ಕೂ ಹಿಂದೆ ದೊಡ್ಡ ಸಂಚು ಇದೆ.
“ಒಬ್ಬ ಸಹೋದರನಾಗಿ, ಮಗನಾಗಿ ನಿಮ್ಮ ವಿಜಯ್ಗೆ ನ್ಯಾಯ ಬೇಕು,” ಎಂದು ಜನರ ಬಳಿ ಮನವಿ ಮಾಡಿದರು. ಇದೇ ವೇಳೆ, ತಮ್ಮ ರಾಜಕೀಯ ಪ್ರವೇಶದ ಉದ್ದೇಶವನ್ನು ವಿವರಿಸಿದ ಅವರು, “ನಾನು ಬೇಕಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ನಿಮ್ಮ ಸೇವೆ ಮಾಡಲು, ನಿಮ್ಮ ಪ್ರೀತಿಗೆ ಕೃತಜ್ಞತೆ ಸಲ್ಲಿಸಲು ಮತ್ತು ನಿಮ್ಮ ನೋವುಗಳನ್ನು ಹಂಚಿಕೊಳ್ಳಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ನಿಮಗೆ ಎಂದಿಗೂ ಸುಳ್ಳು ಹೇಳುವುದಿಲ್ಲ, ಮೋಸ ಮಾಡುವುದಿಲ್ಲ,” ಎಂದು ಭರವಸೆ ನೀಡಿದರು.
