Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಧುಮೇಹ ಪಾದ ರೋಗಿಗಗಳ ಪಾಲಿಕೆ ಆಶಾಕಿರಣವಾದ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ
  • Bangalore
  • Politics
  • State

ಮಧುಮೇಹ ಪಾದ ರೋಗಿಗಗಳ ಪಾಲಿಕೆ ಆಶಾಕಿರಣವಾದ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ

Praja Vahini March 23, 2026 1 minute read
Screenshot_2026-03-23-20-45-24-59_6012fa4d4ddec268fc5c7112cbb265e7
Spread the love

ಬೆಂಗಳೂರು: ದೇಶದಲ್ಲಿರುವ ಸುಮಾರು 8 ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದು ಇವರಲ್ಲಿ ಬಹುತೇಕ ಮಂದಿ ಕಾಲುಗಳಿಗೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಎಂಬುದು ವರದಿಗಳಲ್ಲಿ ಕಂಡುಬಂದಿದೆ.

ಮಧುಮೇಹ ಪಾದದ ಹುಣ್ಣು ಅಂದರೆ ಡಯಾಬಿಟಿಕ್‌ ಫುಟ್‌ ಅಲ್ಸರ್‌ (DFU) ಮಧುಮೇಹ ರೋಗಿಗಳಲ್ಲಿ 25% ರಿಂದ 34% ರವರೆಗೆ ಒಂದು ಹಂತದಲ್ಲಿ ಪರಿಣಾಮ ಬೀರುತ್ತದೆ, ಆ ಪ್ರಕರಣಗಳಲ್ಲಿ ಅರ್ಧದಷ್ಟು ಗಂಭೀರ ಸೋಂಕಿಗೆ ತುತ್ತಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ (HBOT) ಪರಿಣಾಮಕಾರಿಯಾಗಿದ್ದು, ರೋಗಿಗಳಿಗೆ ಸಾಕಷ್ಟು ಸಮಾಧಾನ ಒದಗಿಸುತ್ತದೆ.

ಇಂದಿರಾನಗರದಲ್ಲಿರುವ ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (KIER) ಅಂತಹ ಚಿಕಿತ್ಸೆಯನ್ನು ಆರಂಭಿಸಲಾಗಿದೆ. “HBOT ಕೇವಲ ವೈದ್ಯಕೀಯ ಚಿಕಿತ್ಸೆಯಲ್ಲ. ಇದು ಸಮಾಧಾನಕರ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದಾಗಿದೆ.

ಸೋಮವಾರ ಈ ಚಿಕಿತ್ಸಾ ಪದ್ಧತಿಯನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು, ಈಗ ಮಧುಮೇಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನಾವು ಸಜ್ಜಾಗಿದ್ದೇವೆ ಎಂದರು.

ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಜಗತ್ತಿನ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ. ಪ್ರತಿ 7 ವಯಸ್ಕರಲ್ಲಿ ಒಬ್ಬರಿಗೆ ಮಧುಮೇಹ ಇದೆ. ಜೊತೆಗೆ ಮಧುಮೇಹ ಪಾದದ ಕಾಯಿಲೆಯು ಇರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ದೈನಂದಿನ ಸಮಯದಲ್ಲಿ ಬರಿಗಾಲಿನಲ್ಲಿ ನಡೆಯುವುದು ಇವರಿಗೆ ದುಸ್ತರವಾಗಿದೆ. ಇದರಿಂದ
ಆರ್ಥಿಕ ಹಾನಿಯೂ ಆಗುತ್ತಿದೆ. ಮಧುಮೇಹ ಪಾದದ ರೋಗನಿರ್ಣಯದಿಂದ ಗುಣಪಡಿಸುವವರೆಗೆ ಸರಾಸರಿ ₹1.5 ಲಕ್ಷ ವೆಚ್ಚವಾಗುತ್ತದೆ.

ಈ ಕುರಿತು ಮಾತನಾಡಿದ ಕೆಐಇಆರ್‌ ನಿರ್ದೇಶಕ ಡಾ. ರವಿ, ಮಧುಮೇಹ ಪಾದದ ಗಾಯದ ರೋಗಿಗಳಿಗೆ ಹೆಚ್ಚಿನ ಸಾಂದ್ರತೆಯ ಆಮ್ಲಜನಕವನ್ನು ನೀಡುವ ಮೂಲಕ ಇದನ್ನು ಗುಣಪಡಿಸಬಹುದಾಗಿದೆ. ಈ ಚಿಕಿತ್ಸೆಯು ಸೋಂಕಿನ ವಿರುದ್ಧ ಹೋರಾಡುತ್ತದೆ ಅಥವಾ ಕತ್ತರಿಸಬಹುದಾದ ಅಂಗಗಳನ್ನು ಉಳಿಸಲು ನಿರ್ಣಾಯಕವಾಗಿ ಸಹಾಯ ಮಾಡುತ್ತದೆ” ಎಂದು ವಿವರಿಸಿದರು.

About the Author

Praja Vahini

Editor

View All Posts

Spread the love

Post navigation

Previous: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ
Next: BJP ಯಿಂದ ಕಾಂಗ್ರೆಸ್ ಸೇರುತ್ತಿರುವ ಕಾರ್ಯಕರ್ತರನ್ನು ಸ್ವಾಗತಿಸುತ್ತೇನೆ: ಡಿಕೆಶಿ 

Views:

20

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.