18ನೇ ಶಾಲಾ ವಾರ್ಷಿಕೋತ್ಸವ/ ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಸತ್ಕಾರ
ಶಹಾಪುರ: ವಿದ್ಯೆಯಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದ್ದು, ಸಾಮಾಜಿಕ ಕೌಶಲ್ಯ , ಭಾವನಾತ್ಮಕ ಸ್ಥಿರತೆ ಮತ್ತು ನೈತಿಕ ಶಿಕ್ಷಣ ಕಲಿಸುವ ಕೇಂದ್ರವಾಗಿವೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಸನಗೌಡ ಮಾಲಿಪಾಟೀಲ ಹೇಳಿದರು.
ತಾಲೂಕಿನ ಸಗರ ಗ್ರಾಮದ ಜಗದ್ಗುರು ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಎಸ್‌ಆರ್‌ಐ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ಕಾವೇರಿ ವಿದ್ಯಾ ಮಂದಿರದ ೧೮ನೇ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಶಾಲಾ ವಾರ್ಷಿಕೋತ್ಸವ ಮನರಂಜನೆಗೆ ಸೀಮಿತವಾಗದೆ ಪ್ರಗತಿಪರ ಚಿಂತನೆಗಳಿಗೆ ದಾರಿಯಾಗಬೇಕು. ಹೆತ್ತವರು ಭೋಧಿಸುವ ನೀತಿ, ರೀತಿ ಶಿಸ್ತು ಮಕ್ಕಳ ಶ್ರೇಯಸ್ಸಿಗಾಗಿಯೇ ಇದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಅಧ್ಯಕ್ಷರಾದ ಡಾ.ದೇವೇಂದ್ರಪ್ಪ ಹಡಪದ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನು ತೆರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಉ.ಕ ಕರವೇ ಅಧ್ಯಕ್ಷ ಡಾ. ಶರಣು ಬಿ ಗದ್ದುಗೆ ಮಾತನಾಡಿ ಶೈಕ್ಷಣೀಕವಾಗಿ ಅತಿ ಹಿಂದುಳಿದ ನಮ್ಮ ಜಿಲ್ಲೇಯಲ್ಲಿ ನಾಲ್ವರು ಅಭ್ಯರ್ಥಿಗಳು ಒಂದೇ ವೇಳೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ, ಜಿಲ್ಲೇಗೆ ಅಂಟಿದ್ದ ಹಣೆಪಟ್ಟಿಯನ್ನೇ ಬದಲಿಸಿದ್ದು, ಪ್ರಸ್ತುತ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಅಂತಹ ಛಲ ಮಕ್ಕಳಲ್ಲಿ ಬರಬೇಕು. ಮಕ್ಕಳು ಆಸಕ್ತಿ ಇರುವ ಕ್ಷೇತ್ರದಲ್ಲಿ ಗುರಿ ಇಟ್ಟು ಮುನ್ನಡೆಯಬೇಕು. ಗುರಿ ಈಡೇರಲು ನಿಖರತೆಬೇಕು. ಸಾಧಿಸುವ ಛಲ ನಿಮ್ಮಲ್ಲಿ ಮೂಡಬೇಕು. ಆಧರ್ಶ ಗುಣಗಳನ್ನು ಅಳವಡಿಸಿಕೊಂಡಾಗ ಯಶಸ್ಸು ತಾನಾಗಿ ಹೊರಹೊಮ್ಮುತ್ತದೆ ಎಂದರು.
ಕಾವೇರಿ ವಿದ್ಯಾ ಮಂದಿರ ಸಂಸ್ಥಾಪಕ ಅಧ್ಯಕ್ಷ ಡಾ.ದೇವಿಂದ್ರಪ್ಪ ಹಡಪದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣದಿಂದ ಮಾತ್ರ ಎಲ್ಲ ಸಮಸ್ಯೆಯನ್ನು ಎದುರಿಸಲು ಸಾಧ್ಯ. ಜ್ಞಾನದ ಜೊತೆಗೆ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ವಿಶ್ವನಾಥರೆಡ್ಡಿ ಗೊಂದಡಗಿ( ಸಾಹಿತ್ಯ), ಈರಣ್ಣ ಮೌರ್ಯ (ಪತ್ರಿಕೋದ್ಯಮ), ನಿಜಲಿಂಗಪ್ಪ ಟಣಕೇದಾರ( ಜನಪದ ಸಾಹಿತ್ಯ), ಡಾ. ಧರ್ಮಣ್ಣ ಬಡಿಗೇರ (ಸಂಶೋದನೆ), ಈಶ್ವರಪ್ಪ ಜಿನಕೇರಿ( ರಂಗಭೂಮಿ), ಡಾ.ಮಡಿವಾಳಪ್ಪ ಗಡಿಗಿ (ವೈದ್ಯಕೀಯ), ಶ್ರೀಮತಿ ಮೀನಾಕ್ಷಿ ಹೊಸ್ಮನಿ (ಶಿಕ್ಷಣ), ನಿರ್ಮಲಾ ಬಾಳಿ(ಶಿಕ್ಷಣ), ಪರಮಣ್ಣ ಬಡಿಗೇರ( ಸಾರಿಗೆ), ದ್ಯಾವಣ್ಣ ವಿಶ್ವಕರ್ಮ (ಸಂಗೀತ) ಅವರಿಗೆ ೨೦೨೬ನೇ ಸಾಲಿನ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಸಾಹಿತಿಗಳು ಮತ್ತು ಪತ್ರಕರ್ತ ಬಸವರಾಜ ಶಿಣ್ಣೂರ ಅವರಿಗೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಹಿನ್ನಲೇ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಣ್ಣ ಪಡಶೇಟ್ಟಿ, ಹಿರಿಯ ಮುಖಂಡ ಮಹಾಂತಗೌಡ ಸುಬೇದಾರ, ಖಾಸಗಿ ಶಾಲ ಒಕ್ಕೂಟದ ಅಧ್ಯಕ್ಷ ಆರ್.ಚೆನ್ನಬಸ್ಸು ವನದುರ್ಗ, ಯೋಗ ಗುರು ರಾಮರಾವ್ ಕುಲಕರ್ಣಿ, ನಿಂಗಣ್ಣ ಮುದ್ದಾ, ಗಿರೆಪ್ಪಗೌಡ ಕಟ್ಟಿಮನಿ, ನಿವೃತ್ತ ಶಿಕ್ಷಕ ಶೇಖರಪ್ಪ ಅರಕೇರಿ, ವಿನೋದ ದೇವರಗುಡಿ, ಚಂದಣ್ಣ ಚೌಡಗುಂಡ, ಕಾವೇರಿ ವಿದ್ಯಾ ಮಂದರದ ಮುಖ್ಯ ಗುರುಗಳಾದ ಶ್ರೀಮತಿ ಜಯ.ಬಿ ಹಡಪದ, ಕಾವೇರಿ ಹಡಪದ, ಶರಬಣ್ಣ ಅಂಗಡಿ, ಅಮರಣ್ಣ ಹೇರುಂಡಿ ಸೇರಿದಂತೆ ಇತರರು ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಲ್ಲಮ್ಮ ಪೂಜಾರಿ ನಿರೂಪಿಸಿದರು. ಸೌಮ್ಯ ಬಡಿಗೇರ ಸ್ವಾಗತಿಸಿದರು, ಶ್ರದ್ಧಾ ಮೇಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪೂಜಾ ಗೊರವಯ್ಯ ವಂದಿಸಿದರು.
