Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಹಳೇ ತಹಸೀಲ್ ಜಾಗದಲ್ಲೇ ಪ್ರಜಾಸೌಧ ನಿರ್ಮಾಣ
  • State
  • ಶಹಾಪುರ

ಹಳೇ ತಹಸೀಲ್ ಜಾಗದಲ್ಲೇ ಪ್ರಜಾಸೌಧ ನಿರ್ಮಾಣ

Praja Vahini March 21, 2026
Screenshot_2026-03-21-21-23-10-48_6012fa4d4ddec268fc5c7112cbb265e7
Spread the love

ಶಹಾಪುರ: ನಗರದ ಹೃದಯ ಭಾಗದಲ್ಲಿರುವ ಹಳೆ ತಹಸೀಲ್ ಸಂಕೀರ್ಣದ ಜಾಗದಲ್ಲೇ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ತಾಲೂಕ ಆಡಳಿತ ಸಂಕೀರ್ಣ ಪ್ರಜಾಸೌಧವು ನಿರ್ಮಾಣವಾಗುವುದೇ ಸೂಕ್ತವಾದದ್ದು ಎಂದು ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ಸರ್ವೆ ನಂ.೩೭೬ರಲ್ಲಿ ಇರುವ ಹಳೆ ತಹಸೀಲ್ ಸಂಕೀರ್ಣದ ಸ್ಥಳದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸರ್ಕಾರಿ ಕಚೇರಿಗಳು ನಿರ್ಮಾಣವಾಗುವ  ಚಿಂತನೆಯಿಂದ ಹಿರಿಯರಾದ ಸಂಗಣಗೌಡ ಹಳಿಸಗರ ಅವರು ಸಹ ೧೯೭೦ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ಹಳಿಸಗರ ಭಾಗದ ಅಭಿವೃದ್ಧಿ ಆಗಬೇಕು ಎನ್ನುವ ಹಿತದೃಷ್ಠಿಯಿಂದ ಸುಮಾರು ೬ ಎಕರೆ ಸ್ಥಳವನ್ನು ದಾನವಾಗಿ ನೀಡಿದ್ದರು. ಅಂದರೆ ಈಗೀರುವ ಪೊಲೀಸ್ ಗ್ರಾಂಡ್ ನಿಂದ ೬ ಎಕರೆಯ ವ್ಯಾಪ್ತಿಯಲ್ಲಿ ಭೂಮಿಯನ್ನು ದಾನವಾಗಿ ನೀಡಲಾಗಿತ್ತು. ಇಲ್ಲಿಯೇ ಸರ್ಕಾರಿ ಕಛೇರಿಗಳು ನಿರ್ಮಿಸಬೇಕೆಂಬ ಕನಸು ಅವರದ್ದಾಗಿತ್ತು. ಆದ್ದರಿಂದ ಈ ಬಗ್ಗೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಸಹ ಮನಸ್ಸು ಮಾಡಿ ಇದನ್ನು ಗಂಭೀರವಾಗಿ ಪರಿಗಣಿಸಿ ಜನರ ಅನುಕೂಲಕ್ಕೆ ತಕ್ಕ ಸ್ಥಳವಾದ ಹಳೇ ತಹಸೀಲ್ ಕಚೇರಿಯ ಸ್ಥಳದಲ್ಲೆ ಪ್ರಜಾಸೌಧ ನಿರ್ಮಿಸಬೇಕು ಮತ್ತು ಈ ಸ್ಥಳವು ನಗರದ ಮಧ್ಯಭಾಗಲಿದ್ದು, ಮುಖ್ಯರಸ್ತೆ ಸಂಪರ್ಕ ಹಾಗೂ ಬಸ್ ಸೌಲಭ್ಯ ಇರುವುದರಿಂದ ಗ್ರಾಮೀಣ ಜನತೆಗೆ ಸುಲಭವಾಗಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಕೋರ್ಟ್ , ಕೃಷಿ , ಮಾರುಕಟ್ಟೆ, ಸರಕಾರಿ ಆಸ್ಪತ್ರೆ, ಪೋಸ್ಟ್ ಆಫೀಶ್ ಎಲ್ಲಾ ಪ್ರಮೂಖ ಸ್ಥಳಗಳಿಂದ ತಲುಪಲು ಹತ್ತಿರ ಆಗುತ್ತದೆ. ಆದ್ದರಿಂದ ಹಳೇ ತಹಸೀಲ್ ಸ್ಥಳದಲ್ಲೇ ಪ್ರಜಾಸೌಧ ನಿರ್ಮಾಣವಾದರೆ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

About the Author

Praja Vahini

Editor

View All Posts

Spread the love

Post navigation

Previous: ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಗಳ ಘೋಷಣೆ-ಯತ್ನಾಳ್‌ ಹೊಸ ಬಾಂಬ್‌
Next: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು

Views:

137

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.