ವಿಜಯಪುರ: ರಾಜ್ಯ ರಾಜಕೀಯದಲ್ಲಿ ಬೈ ಎಲೆಕ್ಷನ್ ಕಾವು ಜೋರಾಗಿದ್ದು, ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದೀಗ ಬಾಗಲಕೋಟೆ ಅಭ್ಯರ್ಥಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಇಂದು (ಗುರುವಾರ ಮಾರ್ಚ್ 19) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆ ಕ್ಷಣದಲ್ಲಿ ಬದಲಾದ್ರೂ ಆಶ್ಚರ್ಯ ಪಡಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: By Elections: ಅಭ್ಯರ್ಥಿಗಳನ್ನು ಘೋಷಿಸಿದ BJP
ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಗುತ್ತೆ. ಶಾಮನೂರು ಅವರ ಉಪಕಾರ ಪೂಜ್ಯ ತಂದೆ ಯಡ್ಡಿಯೂರಪ್ಪ, ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮೇಲೆ ತುಂಬಾ ಇದೆ. ರಾಘವೇಂದ್ರ ಹಾಗೂ ವಿಜಯೇಂದ್ರ ಗೆಲ್ಲಲು ಶಾಮನೂರು ಅವರ ಸಹಾಯ ಇದೆ. ಟಿಕೆಟ್ ಈಗ ಕೊಟ್ಟಿರೋದು ತಾತ್ಕಾಲಿಕ ಎಂದು ಯತ್ನಾಳ್ ಮಾತನಾಡಿದ್ದಾರೆ.
