ಬೆಂಗಳೂರು: ಇಂದು ರಾಜ್ಯದಾದ್ಯಂತ ಯುಗಾದಿ ಹಬ್ಬವನ್ನು ಬಹಳ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಹಿನ್ನೆಲೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.
ಹೌದು, ಹಿಂದೂ ಸಂಪ್ರದಾಯದಲ್ಲಿ ಆಚರಿಸಲಾಗುತ್ತಿರುವ ಹಬ್ಬಗಳಲ್ಲಿ ಒಂದಾದ ಯುಗಾದಿ ಹಬ್ಬವುಕೃತಿಯಲ್ಲಿ ಹೊಸ ಚಿಗುರು ಮೂಡುವ, ವಸಂತ ಕಾಲದ ಆಗಮನದ ಸಂಕೇತವಾಗಿದೆ.
ಇನ್ನು ಯುಗಾದಿ ಹಬ್ಬಕ್ಕೆಂದು ಜನರು ಬೆಳಿಗ್ಗೆಯಿಂದಲೇ ಪೂಜೆಗಳಿಗೆ ಬೇಕಾಗಿರುವ ಸಾಮಗ್ರಿಗಳನ್ನು ಖರೀದಿಗೆ ಮುಂದಾಗಿದ್ದು, ಪೂಜೆಗೆ ಬೇಕಾಗಿರುವ ಹೂವು, ಹಣ್ಣು ಸೇರಿದಂತೆ ಇನ್ನೂ ಹಲವು ರೀತಿಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ
ಬೆಂಗಳೂರು ಅಕ್ಕಪಕ್ಕದ ಹೂವಿನ ಬೆಳೆಗಾರರು ನೇರ ಮಾರಾಟ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿದ್ದು, ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: By Elections: ಅಭ್ಯರ್ಥಿಗಳನ್ನು ಘೋಷಿಸಿದ BJP
