ಬೆಂಗಳೂರು: ಕನ್ನಡ ಬಿಗ್ ಬಾಸ್ನ ಮಾಜಿ ಸ್ಪರ್ಧೆ ರಜತ್ ಅವರು ಒಂದಲ್ಲ ಒಂದು ರೀತಿ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ ಹಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಮಚ್ಚು, ಲಾಂಗು ಹಿಡಿದು ರಿಲ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದ ರಜತ್ ಇದೀಗ ಬೆದರಿಕೆ ಹಾಗೂ ನಿಂದನೆ ಆರೋಪದಡಿ ರಜತ್, ಕಿರಣ್ ವಿರುದ್ಧ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ BNS 351(2), 352 ಸೆಕ್ಷನ್ ಬೆದರಿಕೆ ಮತ್ತು ನಿಂದನೆ ಆರೋಪದಡಿ ಕಿರಣ್ ಹಾಗೂ ರಜತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಎ1 ಆರೋಪಿಯಾಗಿ ರಜತ್, ಎ2 ಆರೋಪಿ ಕಿರಣ್ ಎಂಬುವರನ್ನ ಮಾಡಲಾಗಿದೆ.
ಫೋನ್ ಕರೆ ಮುಖಾಂತರ ಬೆದರಿಕೆ ಹಾಕಿರೋ ಆರೋಪ ಮಾಡಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಡಾಗ್ ಸತೀಶ್ ಸ್ನೇಹವನ್ನು ಬಿಡಬೇಕೆಂದು ಬೆದರಿಕೆ ಹಾಕಿದ್ದಾರೆ. ದೂರುದಾರರ ಕಾರಿನ ಪೋಟೋ ಕಳಿಸಿ ಮೆಸೇಜ್ ಮೂಲಕ ಇದು ರಜತ್ ಬುಜ್ಜಿ… ಕಾಲ್ ಮಾಡ್ತಾ ಇದೀನಿ.. ವಾಪಸ್ ಕಾಲ್ ಮಾಡ್ತೀರಾ? ಇಲ್ವಾ ನಾವೇ ಒಳಗೆ ಹಾಕಿಸಬೇಕಾ ಎಂದು ಬೆದರಿಕೆ ಹಾಕಲಾಗಿದೆ. ಅಷ್ಟೇ ಅಲ್ಲದೆ ಕಾನ್ಫರೆನ್ಸ್ ಕಾಲ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅಥವಾ ಬೇರೆ ವ್ಯಕ್ತಿ ಎಂಬುವುದರ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ
ಇನ್ನು ಕೆ.ಆರ್.ಪುರಂ ಪೊಲೀಸರು ಘಟನೆ ಸಂಬಂಧ ವಿಚಾರಣೆಗೆ ಬರುವಂತೆ ರಜತ್ ಹಾಗೂ ಕಿರಣ್ ಎಂಬುವವರಿಗೆ ನೋಟಿಸ್ ನೀಡಿ, ವಿಚಾರಣೆ ಕರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
