Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ: ಸಿಎಂ
  • Bangalore
  • Politics
  • State

ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ: ಸಿಎಂ

Praja Vahini March 6, 2026 1 minute read
WhatsApp Image 2026-03-06 at 17.37.31 (1)
Spread the love

ಬೆಂಗಳೂರು: 2026-27 ನೇ ಆಯವ್ಯಯದಲ್ಲಿ  ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಛೇರಿ ಕೃಷ್ಣಾದಲ್ಲಿ 2026 – 2027ನೇ ಸಾಲಿನ ಬಜೆಟ್ ಕುರಿತಾಗಿ ಇಂದು (ಶುಕ್ರವಾರ ಮಾರ್ಚ್ 06) ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದ ಅವರು, 2017 ರಲ್ಲಿ ಜಿಎಸ್ ಟಿ ಜಾರಿಗೆ ಬಂದಿದ್ದು, 8 ವರ್ಷಗಳ ನಂತರ ದರ ತರ್ಕಬದ್ಧಗೊಳಿಸಿದರು. ಇದರಿಂದ ಶೇ.10 ರಷ್ಟಿದ್ದ ರಾಜ್ಯದ ತೆರಿಗೆ ಸಂಗ್ರಹಣೆ, ಈಗ ಶೇ. 4 ಕ್ಕೆ ಇಳಿದಿದೆ. ಕೆಲವು ರಾಜ್ಯಗಳು ಕೇಂದ್ರದ ಈ ನಿರ್ಧಾರದಿಂದ ದರಪರಿಷ್ಕರಣೆಯಿಂದ ತೊಂದರೆಗೊಳಗಾಗಿದ್ದು, ಇದುವರೆಗೂ ಚೇತರಿಸಿಕೊಂಡಿಲ್ಲ. ಜಿಎಸ್ ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.  ಕೇಂದ್ರದ ಈ ಹೊಸ ನೀತಿಯಿಂದ ಸುಮಾರು ರಾಜ್ಯಕ್ಕೆ ಸುಮಾರು 10 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಮುಂದಿನ ವರ್ಷ 15000 ಕೋಟಿ ಯಷ್ಟು ನಷ್ಟವಾಗಲಿದೆ. ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ಬಜೆಟ್ನಲ್ಲಿ  ಹೆಚ್ಚು ವಿತ್ತೀಯ ಶಿಸ್ತಿನ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು.

ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮವಾಗಿದೆ

ರಾಜ್ಯದ ಜಿಎಸ್ ಡಿಪಿಯು 2025-26 ರಲ್ಲಿ ಬೆಳವಣಿಗೆ 8.1 ರಷ್ಟಿದೆ. ರಾಷ್ಟ್ರದ ಜಿಡಿಪಿ ಬೆಳವಣೆಗೆ 7.4 ರಷ್ಟಿದೆ. ಕೇಂದ್ರಕ್ಕಿಂತ ನಮ್ಮ ರಾಜ್ಯದ ಬೆಳವಣಿಗೆ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳಿಗೆ 52 000 ಕೋಟಿ ಕೊಟ್ಟಿದ್ದೇವೆ. ಇಲ್ಲಿಯವರೆಗೆ ಗ್ಯಾರಂಟಿಗಳಿಗೆ 121591 ಕೋಟಿ ವೆಚ್ಚ ಮಾಡಲಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಅದರ ಜೊತೆಗೆ ವಿತ್ತಿಯ ಶಿಸ್ತನ್ನೂ ಪಾಲಿಸಲಾಗಿದೆ. 2023-24 ರಿಂದ ಮೂರು ವರ್ಷವೂ ಕೂಡ ಆರ್ಥಿಕ ಶಿಸ್ತು ಕಾಯ್ದೆಯ ಮಾನದಂಡಗಳ ಪಾಲನೆಯಾಗಿದೆ. ಈ ಬಾರಿ ಕೇಂದ್ರದ ಅನುದಾನದಲ್ಲಿ ರಾಜ್ಯಕ್ಕೆ 10,000 ಕೋಟಿ ಗಳ ಕೊರತೆ ಆಗಿದೆ ಎಂದರು.

ಜೆಜೆಎಂ ನಡಿ ಕೇಂದ್ರದ ಪೂರ್ಣ ಪಾಲು ಬಂದಿಲ್ಲ

ಜಲಜೀವನ ಮಿಷನ್ ನ ಯೋಜನಾ ವೆಚ್ಚ. ಒಟ್ಟು 69488 ಕೋಟಿ ಆಗಿದ್ದು ಕೇಂದ್ರದ ಪಾಲು 30880 ಕೋಟಿ, ಆದರೆ ಈವರೆಗೆ ನಮಗೆ ದೊರೆತಿರುವ ಕೇಂದ್ರದ ಅನುದಾನ ಕೇವಲ 11786 ಕೋಟಿ ನೀಡಿದ್ದಾರೆ. ಈ ಯೋಜನೆಗೆ 38600 ರಾಜ್ಯ ಸರ್ಕಾರ ಈಗಾಗಲೇ ವೆಚ್ಚ ಮಾಡಿದೆ. 15500 ಕೋಟಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ವೆಚ್ಚ ಮಾಡಿದೆ ಎಂದು ವಿವರಿಸಿದರು.

ಪ್ರಧಾನಿ ಮೋದಿಯವರ ಅವಧಿಯಲ್ಲಿ ದೇಶದ ಸಾಲ 165 ಲಕ್ಷ ಕೋಟಿ

ಈ ವರ್ಷ ಕೇಂದ್ರದ ವಿತ್ತೀಯ ಕೊರತೆ 4.4 ರಷ್ಟಿದ್ದು, ಕೇಂದ್ರಸರ್ಕಾರದಲ್ಲಿ 218 ಲಕ್ಷ ಕೋಟಿ ಸಾಲವಿದೆ. ಬಿಜಿಪಿಯು  ನಮ್ಮ ಪ್ರಶ್ನಿಸಲು ಯಾವ ನೈತಿಕತೆ ಇದೆ.  ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಸಾಲದ ಮಿತಿ ಮಾನದಂಡಗಳಲ್ಲಿ ತಿಳಿಸಿದ ಮಿತಿಯಲ್ಲಿರಬೇಕು. 2014ರ ಮೊದಲು, 53.11 ಲಕ್ಷ ಕೋಟಿಯಿದ್ದ ದೇಶದ ಸಾಲ  ಈಗ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ 165 ಲಕ್ಷ ಕೋಟಿ ಯಾಗಿದೆ. ಪ್ರತಿಪಕ್ಷ ನಾಯಕ ಅಶೋಕರವರು ರಾಜ್ಯಸರ್ಕಾರ ಸಾಲ ಮಾಡುತ್ತಿದೆ ಎಂಬ ಟೀಕೆ ಮಾಡಲು ಯಾವುದೇ ನೈತಿಕತೆ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಾಗ, 55,33,847 ಕೋಟಿ  ಸಾಲವಿತ್ತು. ಎಲ್ಲ ಸರ್ಕಾರಗಳ ಅವಧಿಯಲ್ಲಿ ಸಾಲಗಳನ್ನು ಮಾಡಲಾಗಿದೆ ಎಂದರು. ಇದನ್ನೂ ಓದಿ: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಂ

 

About the Author

Praja Vahini

Editor

View All Posts

Spread the love

Post navigation

Previous: ಯಡಿಯೂರಪ್ಪ, ಬೊಮ್ಮಾಯಿ ಹಣ ಇರಲಿ, ಬಿಡಲಿ, ಕಾಮಗಾರಿ ಕೊಟ್ಟಿದ್ದೇ ಕೊಟ್ಟದ್ದು: ಡಿಕೆಶಿ
Next: ರಾಜ್ಯ ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ- ಡಾ.ಎಂ.ಬಿ ಹಡಪದ ಸುಗೂರ ಎನ್ ಆಕ್ರೋಶ

Views:

28

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.