ಬೆಂಗಳೂರು: ಹೇಗಾದರೂ ಮಾಡಿ ಸರ್ಕಾರದಿಂದ ಕಡಿಮೆ ದುಡ್ಡಿಗೆ ಜಮೀನು ಪಡೆದು ದರಲ್ಲಿ ಮನೆ ಕಟ್ಟಬೇಕು ಅಥವಾ ಸ್ವಂತ ಊದ್ಯಮವನ್ನು ಪ್ರಾರಂಭಿಸಬೇಕೆಂದು ಅದೆಷ್ಟೋ ಜನರು ಕಂತಿನ ಮೇಲೆ ಸರ್ಕಾರದ ಜಾಮೀನನ್ನು ಪಡೆದುಕೊಂಡಿರುತ್ತಾರೆ. ಆದರೆ ಇಂಥವರಿಗೆ 20 ರಿಂದ 30 ವರ್ಷ ವಾಗಿದ್ದರೂ ಕೂಡ ಅವರಿಗೆ ಆ ಜಾಗದ ಕುರಿತು ಪೋಡಿ ಸಿಕ್ಕಿರುವುದಿಲ್ಲ. ಮನೆ ಕಟ್ಟಿಕೊಂಡು 30 ವರ್ಷ ಕಳೆದರೂ ಕೂಡ ಆ ಜಾಗಕ್ಕೆ ಹಕ್ಕು ಪತ್ರ ಸಿಕ್ಕಿರುವುದಿಲ್ಲ. ಇದನ್ನೆಲ್ಲಾ ಅರಿತ ರಾಜ್ಯ ಸರ್ಕಾರ ಇದೀಗ ಹೊಸ ಯೋಜನೆಯನ್ನು ತಂದಿದೆ.
ಹೌದು, ಅದೆಷ್ಟೋ ಜನ ತಮ್ಮ ಜಮೀನಿಗಳಿಗೆ ದಾಖಲೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಇಂದಿಗೂ ಕೂಡ ಇದೆ. ಇಂಥ ಪರಿಸ್ಥಿತಿಯನ್ನು ಅರಿತ ಸರ್ಕಾರ ಇದೀಗ ಭೂ ಗ್ಯಾರಂಟಿ ಯೋಜನೆ ಮೂಲಕ ಮಹತ್ವದ ಹೆಜ್ಜೆಯನ್ನು ಇಡುತ್ತಿದೆ.
ರಾಜ್ಯ ಸರ್ಕಾರದಿಂದ ಭೂ ಗ್ಯಾರಂಟಿ ಯೋಜನೆಯಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಭೂಮಿಗೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನು ಸರಿಪಡಿಸುವ ಅಭಿಯಾನವನ್ನು ಕೈಗೊಂಡಿದ್ದಾರೆ.
ಮಾರ್ಚ್ ನಾಲಕ್ಕರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾವಿರಾರು ರೈತರ ಪ್ರಕರಣಗಳನ್ನು ಪರಿಹಾರ ಕೊಡಲು ಸರಕಾರ ಮುಂದಾಗಿದೆ. ಇದನ್ನೂ ಓದಿ: ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ಕೇಂದ್ರದ ಜೊತೆ ಮಾತನಾಡುತ್ತೇನೆ: ಬಿವೈವಿ
ಪ್ರತಿ ರೈತರಿಗೂ ಶಾಶ್ವತವಾಗಿ ದಾಖಲೆಗಳನ್ನು ಮಾಡಿ ಪ್ರತಿ ರೈತರು ನೆಮ್ಮದಿಯಾಗಿ ಬದುಕುವಂತೆ ರಾಜ್ಯ ಸರ್ಕಾರ ಇದೀಗ ಹೊಸ ಹೆಜ್ಜೆಯನ್ನು ಇರುತ್ತಿದೆ ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
