Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ಕಾಣದ ಕೈಗಳಿಂದ ಹುನ್ನಾರ
  • Crime
  • State
  • ಶಹಾಪುರ

ಮಲ್ಲಿಕಾರ್ಜುನ ಮುತ್ಯಾರ ವಿರುದ್ಧ ಕಾಣದ ಕೈಗಳಿಂದ ಹುನ್ನಾರ

Praja Vahini February 28, 2026
Screenshot_2026-02-28-21-16-04-78_6012fa4d4ddec268fc5c7112cbb265e7
Spread the love

ಶಹಾಪುರ: ತಾಲ್ಲೂಕಿನ ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಬಿನ್ ಎಸ್ ಸೆಕ್ಷನ 75(2) ಜತೆಗೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣವನ್ನು ದಾಖಲಾಗಿದ್ದು ಇದು ತಪ್ಪು, ಕೂಡಲೇ ಎಸ್‌ಪಿ ಅವರು ಈ ವಿಚಾರವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಮಗುವಿನ ಹೇಳಿಕೆ ಹಾಗೂ ಅವರ ತಂದೆ ತಾಯಿಗಳ ಹೇಳಿಕೆಗಳನ್ನು ಪರಿಗಣಿಸಿ ಮಲ್ಲಿಕಾರ್ಜುನ ಮುತ್ಯಾರವರ ವಿರುದ್ಧ ದಾಖಲಿಸಿದ ದೂರಿಗೆ ಬಿ. ಬಿ ರಿಪೋರ್ಟ್  ನ್ಯಾಯಾಲಕ್ಕೆ ಸಲ್ಲಿಸಬೇಕು ಇಲ್ಲವಾದರೆ ಅಸಂಖ್ಯಾತ ಭಕ್ತರು ರಸ್ತೆಗಳಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗುರಗುಂಟಿಗಿಯ ಪುಣ್ಯಕೋಟಿ ಆಶ್ರಮದ ಪೂಜ್ಯ ವರಲಿಂಗೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದರು.

ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭಕ್ತರು ಹಾಗೂ ಕೋಲಿ ಕಬ್ಬಲಿಗ ಸಮಾಜದ ಮುಖಂಡರಿಂದ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಅನವಶ್ಯಕವಾಗಿ ಗೊಂದಲ ಉಂಟು ಮಾಡಿ ಅಕ್ಕ ತಂಗಿಯ ಸಂಬಂಧದಲ್ಲಿ ಹುಳಿ ಹಿಂಡಿ ನಮ್ಮ ಸಮಾಜವನ್ನು ಕೆಡಿಸುವ ಕೆಲಸ ನಡೆದಿದೆ. ಎಲ್ಲಾ ಜನಾಂಗದ ಭಕ್ತರು ಇದ್ದೇವೆ. ಪ್ರಕರಣ ಕೈ ಬಿಡಬೇಕು. ಜನರು ದಂಗೆ ಏಳುವ ಮೊದಲು ಎಚ್ಚರಗೊಳ್ಳಬೇಕು. ಧರ್ಮದ ಕಾರ್ಯವನ್ನು ಮಾಡುವ ಮುತ್ಯಾ ನವರಿಗೆ ವ್ಯವಸ್ಥಿತವಾಗಿ ತುಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಕಾಣದ ಕೈಗಳ ಹೊನ್ನಾರ ಇದೆ ಅವರನ್ನ ಪತ್ತೆ ಹಚ್ಚಬೇಕು

ಕೇಲವರು ಮುತ್ಯಾರ ಬೆಳವಣಿಗೆ ನೋಡಿ ಸಹಿಸಲಾಗದೆ ಈ ರೀತಿಯ ಹುನ್ನಾರ ಮಾಡಿದ್ದಾರೆ. ಕಾಣದ ಕೈಗಳು ಇದರ ಹಿಂದೆ ಇದ್ದು ಅವರನ್ನು ಪತ್ತೆ ಮಾಡಬೇಕು. ವಿಡಿಯೋವನ್ನು ಕೆಟ್ಟಾದಾಗಿ ಬಿಂಬಿಸಿ ತೇಜೋವಧೆ ಮಾಡಿದ್ದಾರೆ. ಇದರ ಹಿಂದೆ ಇರುವ ದುಷ್ಟರ ಕೂಟವನ್ನು ಬಂಧಿಸಬೇಕು ಮತ್ತು ಇದಕ್ಕೆ ಪುಷ್ಠಿಕೊಡುವಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಸಹ ಏಕಾಏಕಿ ಸರಿಯಾಗಿ ಪರಿಶಿಲನೆ ಮಾಡದೇ ಪ್ರಕರಣ ದಾಖಲಿಸಿಕೊಂಡು ಕಾನೂನು ಬಾಹಿರ ಹೇಳಿಕೆ ನೀಡಿರುವುದು ಖಂಡನೀಯವಾದದ್ದು, ಇದೂ ಇಲ್ಲಿಗೆ ಮುಗಿಯಲ್ಲ. ಕಾಣದ ದುಷ್ಠ ಶಕ್ತಿಗಳು ಯಾರೇ ಆಗಿದ್ದರು ಸಹ ಅವರನ್ನು ಪತ್ತೇ ಮಾಡಬೇಕು ಮತ್ತು ಅಪ್ರಾಪ್ತೆಯ ಫೊಟೊವನ್ನು ಬಹಿರಂಗಪಡಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಲ್ಲಿಯವರೆಗೂ ಹೋರಾಟ ನಡೆಯುತ್ತದೆ ಎಂದು ಮಠದ ಟ್ರಸ್ಟ್ ನ ಸದಸ್ಯರಾದ ಭೀಮಣ್ಣ ಶಖಾಪುರ ಹೇಳಿದರು.

ಈ ಸಂದರ್ಭದಲ್ಲಿ ರತ್ನಕಾಂತ ಶಿವಯೋಗಿಗಳು ಬಸವಕಲ್ಯಾಣ , ಪೂಜ್ಯ ಶ್ರೀಹೆರಲಿಂಗೇಶ್ವರ ಸ್ವಾಮೀಜಿ, ಬ್ರಹ್ಮಶ್ರೀ ರಾಜುಗುರು ಸ್ವಾಮೀಜಿ, ಜಗದ್ಗುರು ಉಪ್ಪಾರ ಸಮಾಜ ಭಗೀರಥ, ಸೈಯದ್ ಔಕಾತ ವಜೀರ ಪೊಲೀಸ್ ಪಾಟೀಲ್, ದಯಾನಂದ ಮೇತ್ರಿ, ಮಲ್ಲಿಕಾರ್ಜುನ , ರಂಗಣಗೌಡ ಪಾಟೀಲ್, ಶರಣ ಮುದೋಳ, ವಿಜಯಕುಮಾರ ಬಿ.ಪಾಟೀಲ, ಕೃಷ್ಣ ಬಾದ್ಯಾಪುರ, ವಿಜಯಕುಮಾರ, ಕೃಷ್ಣ ಬಾದ್ಯಾಪುರ, ಸಿದ್ದಣಗೌಡ ಅಂದ್ರಳ, ಶರಣು ಸೌಕರ, ಮಲ್ಲಿಕಾರ್ಜುನ ಸರನಾಳ, ಹೈಯಾಳಪ್ಪ ಹಾದಿಮನಿ, ಗಂಗಣ್ಣ, ಮಲ್ಲಪ್ಪ ರೆಡ್ಡಿ, ಸೈಯದ , ರಾಘವೇಂದ್ರ, ಪುನೀತ, ಭೀಮರೆಡ್ಡಿ ಸೇರಿದಂತೆ ಭಕ್ತರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಪತ್ರಕರ್ತರು ಧ್ವನಿಯಿಲ್ಲದವರ ಪರ ನಿಲ್ಲಬೇಕು
Next: ಕೊಲ್ಲಿ ಯುದ್ಧ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯ

Views:

227

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.