ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು (ಬುಧವಾರ ಫೆಬ್ರವರಿ 25) ಹೆಚ್ಎಸ್ಆರ್ ಲೇಔಟ್ ನ ಸೆಕ್ಟರ್ 6ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಈ ಬಾರಿ ಮಳೆ ಬಂದರೂ ಕೂಡ ಯಾವುದೇ ರೀತಿ ತೊಂದರೆಯಾಗದಂತೆ ಸರಾಗವಾಗಿ ನೀರು ಹೋಗಬೇಕೆಂದು ನಾವು ರಸ್ತೆ ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಇಡೀ ಬೆಂಗಳೂರು ನಗರದಲ್ಲಿ ಏಳು ಕೆರೆ ನೀರು ಪುಟ್ಟೆನಹಳ್ಳಿ ಕೆರೆಯಿಂದ ಹಿಡಿದು ಸಾರಕ್ಕಿ, ಹುಳಿಮಾವು ಕೆರೆ, ಅರ್ಕೆರೆ, ಮಡಿವಾಳ ಕೆರೆ ಸೇರಿದಂತೆ ಎಲ್ಲಾ ಕೆರೆಯ ನೀರು ಹೆಚ್ಎಸ್ಆರ್ ಕೆರೆಗೆ ಬರುವುದರಿಂದ ತೊಂದರೆಯಾಗುತ್ತದೆ.
ನಗರದಲ್ಲಿ ಕೇವಲ 70 cm ಮಳೆ ಆದರೆ ಹೆಚ್ಎಸ್ಆರ್ ಕೆರೆಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇದೆ. 100 ಸೆಂಟಿಮೀಟರ್ ಗಿಂತ ಹೆಚ್ಚು ಮಳೆಯಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ಹೆಚ್ಎಸ್ಆರ್ ಕೆರೆಗೆ ಇಲ್ಲ. ಹಾಗಾಗಿ ಅಂತ ಸಂದರ್ಭದಲ್ಲಿ ಕೆಲವು ಅನಾಹುತಗಳಾಗುತ್ತವೆ. ನಿಸರ್ಗಕ್ಕೆ ಯಾರು ಅಡ್ಡಗೋಡೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಕೆಲಸದ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ ನೀಡಿದ ಪ್ರಿಯಾಂಕ ಖರ್ಗೆ
ಇನ್ನು ರಸ್ತೆ ಡಾಂಬರೀಕರಣದ ಕುರಿತು ಮಾತನಾಡಿದ ಅವರು, ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತಲು ಮತ್ತು 5 ಮೇನ್ ರೋಡ್ ಇವೆಲ್ಲವೂ ಸೇರಿದಂತೆ ಇನ್ನು ಹಲವು ರಸ್ತೆಗಳು ಮಳೆ ಬಂದಾಗ ಸಮಸ್ಯೆಯಾಗುತ್ತಿತ್ತು. ಆದ ಕಾರಣದಿಂದ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಿ ಡ್ರೈನೆಜ್ ನೀರನ್ನು ಕ್ಯಾರಿ ಮಾಡಿ ರಾಜ ಕಾಲುವೆಗೆ ಕನೆಕ್ಟ್ ಮಾಡುವಂತ ಬೃಹತ್ ಕಾಮಗಾರಿಯನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
