ಬೆಂಗಳೂರು: ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿರುವುದಿಲ್ಲ ಹಾಗಾಗಿ ಇದೀಗ ರಾಜ್ಯ ಸರ್ಕಾರ ಸುಮಾರು 13 ರಿಂದ 14 ಇಲಾಖೆಗಳಲ್ಲಿ ನೇಮಕಾತಿ ಮಾಡುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ.
ಈ ಕುರಿತು ಇಂದು (ಬುಧವಾರ ಫೆ. 25) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುವುದರ ಜೊತೆಗೆ ವಯೋಮಿತಿ ಸಡಿಲಿಕೆಗೂ ಕೂಡ ಈಗಾಗಲೇ ಸರ್ಕಾರದಲ್ಲಿ ಚರ್ಚೆ ಆಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ದ ಇದೆ. ಯುವಕರ ಸಮಸ್ಯೆಗಳ ಅರಿವಿದೆ, ವಿಪಕ್ಷದಲ್ಲಿ ಇದ್ದಾಗಲೂ ನಾವು ಸ್ಪಂದಿಸಿದ್ದೇವೆ ಈಗಲೂ 35-40 ಸಾವಿರ ಹುದ್ದೆ ತುಂಬಿದ್ದೇವೆ. ಈಗಲೂ ಒಳ ಮೀಸಲಾತಿ ಸಮಸ್ಯೆ ಸ್ವಲ್ಪ ಇದೆ, ಎಲ್ಲವನ್ನು ಸರಿಪಡಿಸಿಕೊಂಡು ನೇಮಕಾತಿ ಆಗಲಿದೆ ಗುರುವಾರ ಕ್ಯಾಬಿನೆಟ್ ನಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಇಬ್ರಾಹಿಂ ವಿರುದ್ಧ FIR ದಾಖಲಾಗಿದ್ಯಾಕೆ?
ಇನ್ನೂ ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬೇರೆ ಏನಿದ್ದರೂ ಪರಿಶೀಲಿಸುತ್ತೇವೆ. ಬಿಜೆಪಿ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು. ಎಷ್ಟು ಹಗರಣಗಳು ಆಗಿತ್ತು ಗೊತ್ತಿದೆ. ಅವರಿದ್ದಾಗ ಯಾರ್ಯಾರು ಒಂದೊಂದು ಹುದ್ದೆ ಎಷ್ಟಕ್ಕೆ ಸೇಲ್ ಮಾಡಿದ್ದಾರೆ ಗೊತ್ತಿದೆ ಎಂದು ಕಿಡಿ ಕಾರಿದ್ದಾರೆ.
