ಶಹಾಪುರ: ಶಹಾಪುರ ಗೃಹರಕ್ಷಕ ದಳದ ಪ್ಲಾಟೂನ್ ಕಮಾಂಡರ್ ಮಲ್ಲಪ್ಪ ಕೊಂಬಿನ ಹಿರಿಯ ಪೊಲೀಸ್ ಅಧಿಕಾರಿಯಿಂದ ಚಿನ್ನದ ಪದಕ ಪಡೆದರು.
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಗೃಹರಕ್ಷಕ ದಳದ ಸೀನಿಯರ್ ಪ್ಲಾಟೂನ್ ಕಮಾಂಡರ್ ಮಲ್ಲಪ್ಪ ಕೊಂಬಿನ.
ನಗರದ ಗೃಹರಕ್ಷಕ ದಳದ ಸೀನಿಯರ್ ಪ್ಲಾಟೂನ್ ಕಮಾಂಡರ್ ಆಗಿ ಸಾರ್ಥಕ ಸೇವೆ ಸಲ್ಲಿಸಿದ ಹಳಿಸಗರದ ಮಲ್ಲಪ್ಪ ಕೊಂಬಿನ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರಕಿದ್ದು, ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಿಂದ ಪದಕ ಪ್ರಶಸ್ತಿ ಪಡೆದುಕೊಂಡರು. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವತಿಯಿಂದ ಚಿನ್ನದ ಪದಕ ದೊರೆತಿದ್ದು, ಸಗರನಾಡಿಗೆ ಹೆಮ್ಮೆ ತರುವ ಸಂಗತಿಯಾಗಿದೆ.
ಅಭಿನಂದನೆ: ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುವುದಕ್ಕೆ ಘಟಕಾಧಿಕಾರಿ ಮಾರ್ಥಂಡಪ್ಪ ಮುಂಡಾಸ್, ಪ್ಲಾಟೂನ್ ಕಮಾಂಡರ್ ದೇವಿಂದ್ರಪ್ಪ ನಾಶಿ ಹಾಗೂ ಸಮಸ್ತ ಗೃಹ ರಕ್ಷಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
