ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನ ಒಂದು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಶಹಾಪುರ ಮೂಲದ ಈಶ್ವರ, ಕನಕಣ್ಣ ಕಕ್ಕಸಗೇರಾ , ಮಹೇಶ್ ಗೌಡಗೆರೆ ಮೂವರು ದ್ವಿಚಕ್ರ ವಾಹನ ಮೇಲೆ ಯಾದಗಿರಿಯಿಂದ ಶಹಾಪುರ ಗೆ ಬರುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಓರ್ವ ಯುವಕನ ತೊಡೆಯಿಂದ ಕಾಲು ಕತ್ತರಿಸಿ ಹೊರಬಿದ್ದ ದುರ್ಘಟನೆ ನಡೆದಿದೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿಗೆ ರವಾನಿಸಲಾಗಿದೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
