ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ಸಾರಿಗೆ ನೌಕರರು ಇಂದು (ಗುರುವಾರ ಫೆ. 19) ಪ್ರತಿಭಟನೆ ಮಾಡಲು ಮುಂದಾಗಿದ್ದು, ಪ್ರತಿಭಟನೆಯನ್ನು ನಿಲ್ಲಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಸರ್ಕಾರದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ನಡೆಯಬೇಕು ದಯಮಾಡಿ ಮುಷ್ಕರವನ್ನು ಕೈಬಿಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಪರ್ ಅಂತ ಅಧಿಕೃತ ಶ್ವೇತ ಪತ್ರ ಹೊರಡಿಸಲಿ: ಆರ್ ಅಶೋಕ್
ಇನ್ನು ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ವಿಚಾರವಾಗಿ ಮಾತನಾಡಿ, ಯಾರು ಕಸ ಹಾಕಲು ಬಿಡಲ್ಲ ಅವರ ಕ್ಷೇತ್ರದಲ್ಲಿ ಕಸ ಎತ್ತಿಸಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಕಸ ಡಂಪ್ ಮಾಡಿಸಲು ಕಾಲು ಮುಗಿಯುವುದಕ್ಕೆ ಆಗುತ್ತಾ? ಕಸ ಎಲ್ಲಾದ್ರೂ ಹಾಕಬೇಕಾಲ್ವಾ, ಎಲ್ಲಿ ಹಾಕಬೇಕು. ಮೊದಲಿನಿಂದಲೂ ಎಲ್ಲಿ ಸಂಪ್ರದಾಯದಂತೆ ಹಾಕ್ತಿವೋ ಅಲ್ಲಿ ಹಾಕ್ತಿವಿ. ಡೆವೆಲಪ್ಮೆಂಟ್ಗೆ ಸಾಕಷ್ಟು ಹಣ ಕೊಟ್ಟಿದ್ದೀವಿ. ಹೆಚ್ಚಿಗೆ ಕೇಳಿದ್ರೆ ಎಷ್ಟು ಅಂತ ಕೊಡುವುದಕ್ಕೆ ಆಗುತ್ತದೆ? ಅವರು ಅರ್ಥ ಮಾಡಿಕೊಳ್ಳಬೇಕು, ಲಾರಿಗಳು ಎಲ್ಲಿ ಹೋಗ್ತಾವೆ. ಬೇರೆ ಕಡೆ ನಾಲ್ಕು ಡಂಪಿಂಗ್ ಯಾರ್ಡ್ ಮಾಡಲು ಶಾಶ್ವತವಾಗಿ ಜಾಗ ನೋಡ್ತಿದ್ದೀವಿ. ಎರಡು ಕಡೆ ಜಾಗ ಫೈನಲ್ ಆಗಿದೆ. ಇದೆಲ್ಲ ಯಾರ ಕಸ? ಜನರ ಕಸ ಅಲ್ವಾ ಎಂದು ಗರಂ ಆದರು.
