ಚಡಚಣ: ಚಡಚಣ ತಾಲ್ಲೂಕಿನ ಲೋಣಿ ಬಿಕೆ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿನ್ನೆ (ಮಂಗಳವಾರ ಫೆ, 17) ವಿಜೃಂಭಣೆಯಿಂದ ರಥೋತ್ಸವ ಜರಗಿತು.
ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಜಾತ್ರೆಗೆ ತದ್ದೇವಾಡಿ, ಕೇರೂರ, ಉಮರಾಣಿ, ಏಳಗಿ ಗೋಟ್ಯಾಳ, ಗೊಡಿಹಾಳ ಜೇವೂರ, ಮರಗೂರ, ಧೂಳಖೇಡ, ಶಿರನಾಳ ಮತ್ತು ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದರು.
ಮಂಗಳವಾರ ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ, ಹೋಮ, ಹವನ, ರುದ್ರಾಭಿಷೇಕ ಮತ್ತು ಇತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಹಾಶಿವರಾತ್ರಿ ಅಮವಾಸ್ಯೆಯಂದು ಮುಂಜಾನೆ 8 ಗಂಟೆಗೆ ಶ್ರೀ ಸಿದ್ಧೇಶ್ವರ ಪಲ್ಲಕ್ಕಿ ಪ್ರದಕ್ಷಣೆ ನಡೆಯಿತು. ಮಧ್ಯಾಹ್ನ 12.30 ಗಂಟೆಗೆ ವರ್ಷವಿಡಿ ದುಡಿದ ಸಮಾಜಕ್ಕೆ ಸಂತೋಷಗೊಳ್ಳಿಸಲು ಗೀಗೀ ಪದಗಳು ಜರುಗಿದವು.
2 ನೇ ದಿನವಾದ ಮಂಗಳವಾರ ಸಂಜೆ 5 ಗಂಟೆಗೆ ಸರ್ವ ಶಿವಾಚಾರ್ಯರ ಅಮೃತ ಹಸ್ತದಿಂದ ಭಕ್ತರ ಸಮ್ಮುಖದಲ್ಲಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಎಸ್ ಎಸ್ ಎಲ್ ಸಿ ಮಕ್ಕಳ ಪೋಷಕರಿಗೆ ಸಚಿವ ದರ್ಶನಾಪುರ ಸಲಹೆ
ರಥೋತ್ಸವ ವಿವಿಧ ಹೂಗಳಿಂದ ಅಲಂಕೃತಗೊಂಡ ಭವ್ಯ ರಥವನ್ನು ದೇವಸ್ಥಾನ ಆವರಣದಲ್ಲಿ ಎಳೆಯುವ ಮೂಲಕ ಭಕ್ತರು ತಮ್ಮ ತಮ್ಮ ಹರಕೆಯನ್ನು ರಥಕ್ಕೆ ಹೂವು, ಬಾಳೆಹಣ್ಣು, ಚುರುಮುರಿ, ಶೇಂಗಾ, ಹಣವನ್ನು ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.
