ಕಲಬುರಗಿ: ರೀಲ್ಸ್ ಮಾಡುವವರೇ ಒಮ್ಮೆ ಗಮನಿಸಿ. ರಿಲ್ಸ್ ಹುಚ್ಚಾಟದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನೀವೇನಾದರೂ ಮಾರಕ ಅಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡಿದರೆ ನಿಮ್ಮ ವಿರುದ್ಧ ಬೀಳುತ್ತೆ ಕೇಸ್.
ಹೌದು, ರೀಲ್ಸ್ ಮಾಡುವ ಮುನ್ನ ಎಚ್ಚರದಿಂದ ರೀಲ್ಸ್ ಮಾಡಿ ಯಾಕೆಂದರೆ ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುವ ಬರದಲ್ಲಿ ಅಪ್ಪಿ ತಪ್ಪಿಯು ನೀವು ಮಾರಕಸ್ತ್ರಗಳನ್ನು ಬಳಸಿ ರೀಲ್ಸ್ ಮಾಡಿದರೆ ಪೊಲೀಸರು ಸ್ವಯಂ ಪ್ರೇರಿತವಾಗಿ ನಿಮ್ಮ ವಿರುದ್ಧ ದೂರು ದಾಖಲಿಸಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುತ್ತಾರೆ ಹಾಗಾಗಿ ರೀಲ್ಸ್ ಮಾಡುವ ಮುನ್ನ ಇರಲಿ ಎಚ್ಚರ.
ಇನ್ನು ಕಲಬುರಗಿ ನಗರದಲ್ಲಿ ಮದುವೆ ಸಂದರ್ಭದಲ್ಲಿ ಮಾರಕ ಅಸ್ತ್ರಗಳನ್ನು ಹಿಡಿದು ರಿಲ್ಸ್ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶಿಸಿದ್ದ ವ್ಯಕ್ತಿಯ ವಿರುದ್ಧ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 33/2026 ಕಲಂ 30 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಸಾರ್ವಜನಿಕವಾಗಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು, ಕಾನೂನಿನಲ್ಲಿ ಅಪರಾಧವಾಗಿದ್ದು, ಸಾರ್ವಜನಿಕರಿಗೆ ಭಯ ಭೀತಿ ಉಂಟಾಗುವ ರೀತಿಯಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ ಗಳನ್ನು ಹಂಚಿಕೊಳ್ಳಬಾರದು ಎಂದು ಕಲಬುರಗಿ ಪೊಲೀಸ್ ಆಯುಕ್ತರು ಪ್ರಕಟಣೆ ಮೂಲಕ ತಿಳಸಿದ್ದಾರೆ. ಹಾಗಾಗಿ ರೀಲ್ಸ್ ಮಾಡುವ ಮುನ್ನ ಎಚ್ಚರದಿಂದ ರೀಲ್ಸ್ ಮಾಡಿ ಇಲ್ಲದಿದ್ದರೆ ಕೇಸ್ ಬೀಳೋದಂತು ಪಕ್ಕ. ಇದನ್ನೂ ಓದಿ: ವಿಧಾನಸೌಧದಲ್ಲಿ ಚಿನ್ನ-ಹಣದ ಬ್ಯಾಗ್ ನಾಪತ್ತೆ ಗೃಹ ಸಚಿವರು ಹೇಳಿದ್ದೇನು?
