ಬೆಂಗಳೂರು: ಮುಂಬೈನ OTM ನಲ್ಲಿ ಯಶಸೀ ರೋಡ್ಶೋ ಪ್ರಾರಂಭದ ನಂತರ, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಈಗ ತನ್ನ ವಾರ್ಷಿಕ ಭಾರತ ರೋಡ್ಶೋದ ಬೆಂಗಳೂರು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾರತೀಯ ಪ್ರಯಾಣ ವ್ಯಾಪಾರದೊಡನೆ ತನ್ನ ಕೇಂದ್ರೀಕೃತ ತೊಡಗಿಕೊಳ್ಳುವಿಕೆಯನ್ನು ಮುಂದುವರೆಸುತ್ತಾ ದಕ್ಷಿಣ ಆಫ್ರಿಕಾಕ್ಕೆ ಒಂದು ಪ್ರಮುಖ ಮೂಲ ಮಾರುಕಟ್ಟೆಯಾಗಿ ಭಾರತದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದೆ.
MEISEAದ ಮಾರ್ಕೆಟಿಂಗ್ ಅಂಡ್ ಕಮ್ಯುನಿಕೇಶನ್ಸ್ ಮ್ಯಾನೇಜರ್ ಮಿಸ್. ಮಿತಾಲೀ ಕರ್ಮಾರ್ಕರ್ ಅವರ ನೇತೃತ್ವದ ರೋಡ್ಶೋ ಉದ್ದಿಮೆ ಸಹಯೋಗಕ್ಕೆ, ಸದಾ ಬದಲಾಗುತ್ತಿರುವ ಪ್ರಯಾಣಿಕ ನಡವಳಿಕೆಯ ಅಂತರ್ದೃಷ್ಟಿಗೆ ಹಾಗೂ ವಿಶ್ರಾಂತಿ, ಕಾರ್ಪೊರೇಟ್ ಮತ್ತು MICE ಪ್ರಯಾಣದಾದ್ಯಂತ ಹೊಸ ವ್ಯಾಪಾರಾವಕಾಶಗಳ ಗುರುತಿಸುವಿಕೆಗೆ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
ರೋಡ್ಶೋ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಮಿಸ್ ಕರ್ಮಾರ್ಕರ್ “ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮಕ್ಕೆ ಭಾರತವು ಆದ್ಯತೆಯುಳ್ಳ ಬೆಳವಣಿಗೆ ಮಾರುಕಟ್ಟೆಯಾಗಿಯೇ ಮುಂದುವರಿದಿದ್ದು ಇದು ಕುಟುಂಬ ಪ್ರಯಾಣ, ಆನುಭವಿಕ ರಜೆಗಳು ಹಾಗೂ ಪ್ರೀಮಿಯಮ್ ಪ್ರಯಾಣದಾದ್ಯಂತ ಪ್ರಬಲ ಆಸಕ್ತಿಯಿಂದ ಮುನ್ನಡೆಸಲ್ಪಟ್ಟಿದೆ. ಇಂದಿನ ಭಾರತೀಯ ಪ್ರಯಾಣಿಕರೂ ಕೂಡ, ತಮ್ಮ ಟ್ರಿಪ್ಗಳನ್ನು ಸಂಶೋಧಿಸಿ ವೈಯಕ್ತೀಕೃತಗೊಳಿಸಲು ಎಐ-ಶಕ್ತಿಯ ಸಾಧನಗಳನ್ನು ಬಳಸಿ, ವಿಭಿನ್ನವಾಗಿ ಯೋಜಿಸುತ್ತಾರೆ, ಹೆಚ್ಚು ಪದೇ ಪದೇ ಪ್ರಯಾಣಿಸುತ್ತಾರೆ ಮತ್ತು ಸಾಂಪ್ರದಾಯಿಕ ನೆಚ್ಚಿನ ಗಮ್ಯಗಳಾಚೆಗಿನ ಗಮ್ಯಗಳನ್ನು ಶೋಧಿಸಲು ಪ್ರಬಲ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ನಡವಳಿಕೆಯಲ್ಲಿನ ಈ ಬದಲಾವಣೆಯು ಹೆಚ್ಚು ಆತ್ಮವಿಶ್ವಾಸವುಳ್ಳ ಮತ್ತು ಕುತೂಹಲಭರಿತ ಪ್ರೇಕ್ಷಕವರ್ಗವನ್ನು ಪ್ರತಿಫಲಿಸುತ್ತದೆ ಮತ್ತು ಇದು ದಕ್ಷಿಣ ಆಫ್ರಿಕಾದಾದ್ಯಂತ ಹೆಚ್ಚು ಪ್ರಸಿದ್ಧವಲ್ಲದ ಪ್ರದೇಶಗಳನ್ನು ಮತ್ತು ಅನುಭವಗಳನ್ನು ಎತ್ತಿತೋರಿಸಲು ಹೊಸ ಅವಕಾಶಗಳನ್ನು ಕಲ್ಪಿಸುತ್ತದೆ.” ಎಂದು ಹೇಳಿದರು.
“ಭಾರತದಲ್ಲಿ ಬೆಂಗಳೂರು, ದಕ್ಷಿಣ ಆಫ್ರಿಕಾದ ಪ್ರಮುಖ ಮೂಲ ಮಾರುಕಟ್ಟೆಗಳ ಪೈಕಿ ಒಂದಾಗಿ ತನ್ನನ್ನು ಸ್ಥಾಪಿಸಿಕೊಂಡಿದೆ. ನಗರದ ಪ್ರಯಾಣಿಕರು ಡಿಜಿಟಲ್ ತಜ್ಞರಾಗಿದ್ದಾರೆ, ಅನುಭವ-ಚಾಲಿತವಾಗಿದ್ದಾರೆ ಮತ್ತು ದೂರದೂರದ ಗಮ್ಯಗಳನ್ನು ಶೋಧಿಸಲು ಹೆಚ್ಚು ಆತ್ಮವಿಶ್ವಾಸವುಳ್ಳವರಾಗಿದ್ದಾರೆ. ಈ ರೋಡ್ಶೋ ಮೂಲಕ ನಾವು ಸ್ಥಳೀಯ ಪ್ರಯಾಣ ವ್ಯಾಪಾರದೊಂದಿಗೆ ನಮ್ಮ ತೊಡಗಿಕೊಳ್ಳುವಿಕೆಯನ್ನು ಇನ್ನಷ್ಟು ಆಳಗೊಳಿಸಿಕೊಂಡು ದಕ್ಷಿಣ ಆಫ್ರಿಕಾದ ಗೋಅರತೆ ಮತ್ತು ಈ ಪ್ರಮುಖ ಮಾರುಕಟ್ಟೆಯಲ್ಲಿ ಅದರ ತತ್ಸಂಬಂಧತೆಯನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ.” ಎಂದು ಹೇಳಿದರು.
