ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ನ ಒಡೆಯ ಉದ್ಯಮ ಲೋಕದ ಧೀಮಂತ ಸಾಮ್ರಾಟ ಸಿಜೆರಾಯ್ ಅವರು ಆತ್ಮಹತ್ಯೆ ಮಾಡಿಕೊಂಡು ಈಗ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.
ಐಷಾರಾಮಿ ಜೀವನ ಮನಸ್ಸಿಗೆ ಬಂದಂತ ಕಾರುಗಳಲ್ಲಿ ಓಡಾಟ ಹೆಲಿಕ್ಯಾಪ್ಟರ್, ವಿಮಾನ ಸೇರಿದಂತೆ ಎಲ್ಲಾ ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದ ಸಿಜೆರಾಯ್ ಇದ್ದಕ್ಕಿದ್ದಂಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಲ್ಲಿ ಸಾವಿರ ಪ್ರಶ್ನೆಗಳು ದಿನದಿಂದ ದಿನಕ್ಕೆ ಮೂಡುತ್ತಲೇ ಇವೆ.
ಮೇಲ್ನೋಟಕ್ಕೆ ಐಟಿ ರೈಡ್ ಆಗಿರುವುದಕ್ಕೆ ಮನನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಸಹೋದರನ ಹೇಳಿಕೆಯನ್ನು ಆಧರಿಸಿ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ನಿಖರವಾಗಿ ತನಿಖೆ ಮಾಡಿದ ನಂತರವೇ ಅವರು ಆತ್ಮಹತ್ಯೆಗೆ ಶರಣಾಗಿದ್ದು ಏಕೆ ಎಂಬ ಪ್ರಮುಖ ಕಾರಣ ಹೊರಬೆಳಲಿದೆ.
ಇನ್ನು ಸಿಜೆ ರಾಯ್ ಅವರ ಆತ್ಮಹತ್ಯೆ ಕುರಿತಾಗಿ ಹಲವು ಪ್ರಶ್ನೆಗಳು ಉದ್ಭವವಾಗುತ್ತಿದ್ದು, ಐಶಾರಾಮಿ ಜೀವನ ನಡೆಸುತ್ತಿದ್ದ ಸಿಜೆರಾಯ್ ಅವರಿಗೆ ಸಂಬಂಧಿಸಿದ ಹಲವು ಸ್ಪೋಟಕ ಸತ್ಯಗಳು ದಿನದಿಂದ ದಿನಕ್ಕೆ ಒಂದೊಂದಾಗಿ ಬಯಲಾಗುತ್ತಿವೆ.
ಪೊಲೀಸರ ಪ್ರಕಾರ ತಮ್ಮ ವ್ಯವಹಾರದಲ್ಲಿ ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡದೆ ಉನ್ನತ ಸಾಮ್ರಾಜ್ಯವನ್ನು ಕಟ್ಟಿದ ಅವರು, ಕರ್ನಾಟಕ, ಕೇರಳ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವರ ವ್ಯವಹಾರ ವಿಸ್ತಾರಗೊಂಡಿತ್ತು. ಆದರೆ ಹೊಸ ಪ್ರಾಜೆಕ್ಟ್ಗಳಿಗೆ ಬ್ಯಾಂಕ್ ಹಣದ ಬದಲು ಕೆಲವು ರಾಜಕಾರಣಿಗಳಿಂದಲೇ ಹೂಡಿಕೆ ಬಂದಿತ್ತು. ಆ ಹಣದಲ್ಲಿ ಬಹುಪಾಲು ಅಕ್ರಮ ಹಣ ಆಗಿರಬಹುದೆಂಬ ಅನುಮಾನವೂ ತನಿಖಾ ಸಂಸ್ಥೆಗಳಿಗೆ ಮೂಡಿತ್ತು ಎನ್ನಲಾಗಿದೆ.
ಆದರೆ ರಾಯ್ ಕೈಗೊಂಡ ಹೊಸ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಇತ್ತ ಬಂದ ಆದಾಯದ ದೊಡ್ಡ ಭಾಗವನ್ನು ಅವರು ಐಷಾರಾಮಿ ಜೀವನಶೈಲಿಗೆ ಖರ್ಚು ಮಾಡುತ್ತಿದ್ದರು. ಪರಿಣಾಮವಾಗಿ ಹಣಕಾಸು ನಿರ್ವಹಣೆಯಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಹೊಸ ಪ್ರಾಜೆಕ್ಟ್ಗಳು ನಷ್ಟಕ್ಕೆ ತಿರುಗುತ್ತಿದ್ದಂತೆಯೇ, ಹೂಡಿಕೆ ಮಾಡಿದ ಕೆಲ ರಾಜಕಾರಣಿಗಳು ಹಣ ವಾಪಸ್ ಕೇಳತೊಡಗಿದ್ದರು. ಇದರ ನಡುವೆ ಕೇಂದ್ರ ತನಿಖಾ ಸಂಸ್ಥೆಗಳು ಸಿಜೆರಾಯ್ ಅವರ ವ್ಯವಹಾರಗಳತ್ತ ಗಮನಹರಿಸಿದ್ದವು. ಬ್ಯಾಂಕ್ ಸಾಲವಿಲ್ಲದೆ ಇಷ್ಟು ದೊಡ್ಡ ಮಟ್ಟದ ವ್ಯವಹಾರಕ್ಕೆ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಯೇ ತನಿಖೆಯ ಮೂಲವಾಗಿತ್ತು.
ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳು, ಇವೆಲ್ಲದಕ್ಕೂ ಉತ್ತರ ನೀಡಲು ಸಾಧ್ಯವಾಗದೆ ಸಿಜೆ ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಉದ್ಯಮ ಲೋಕದ ಸಾಮ್ರಾಟ ಸಿ.ಜೆ ರಾಯ್ ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು?
ಇದೆಲ್ಲದರ ಜೊತೆಗೆ ಸಿಜೆ ರಾಯ್ ಅವರು ಆ ಒಬ್ಬ ನಟಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಅದೇನೆ ಆಗಲಿ ಸಿಜೆರಾಯ್ ಅವರ ಆತ್ಮಹತ್ಯೆಯ ಕುರಿತು ಪ್ರಮುಖವಾಗಿ ತನಿಖೆ ನಡೆಸಿದಾಗಲೇ ಮಾತ್ರ ಅವರ ಆತ್ಮಹತ್ಯೆಗೆ ಕಾರಣವೇನೆಂದು ಬಯಲಾಗಲಿದೆ.
