ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲ ನಟ, ನಟಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಈ ಚಿಕಿತ್ಸೆ ಕೆಲವರಿಗೆ ಮಾತ್ರ ಹೊಂದಿಕೊಂಡರೆ ಇನ್ನೂ ಕೆಲವರಿಗೆ ಅಡ್ಡ ಪರಿಣಾಮ ಬೀಳುತ್ತವೆ.
ಹೌದು, ಇತ್ತೀಚಿಗೆ ಚಿತ್ರರಂಗದ ನಟ, ನಟಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಸರ್ಜರಿ ಅಥವಾ ಬಾಡಿ ಶೇಮಿಂಗ್ ಮಾಡಿಕೊಡಿಸಲು ಮುಂದಾಗುತ್ತಾರೆ. ಅದು ಕೆಲವರಿಗೆ ಹೊಂದಿಕೊಂಡರೆ ಇನ್ನೂ ಕೆಲವರಿಗೆ ಅಡ್ಡ ಪರಿಣಾಮವಾಗಿ ತಮ್ಮ ಇರುವ ಅಂದವನ್ನು ಹಾಳು ಮಾಡಿಕೊಳ್ಳುತ್ತಾರೆ.
ಇದಕ್ಕೆ ದೊಡ್ಡ ಉದಾಹರಣೆ ಎಂಬಂತೆ ಇದೀಗ ಕನ್ನಡ ಚಿತ್ರವಾದ ಮಿಲನದಲ್ಲಿ ನಟಿಸಿದ ನಟಿ ಪಾರ್ವತಿ ಕೂಡ ಇದಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.
ಇತ್ತೀಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ವಿಭಿನ್ನ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ದಪ್ಪದಾಗಿತ್ತು ಕಂಡುಬರುತ್ತದೆ. 2007ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ಕುಮಾರ್ ಅಭಿನಯದ ‘ಮಿಲನ’ ಸಿನಿಮಾ ಪಾರ್ವತಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.
ಪುನೀತ್ ಜೊತೆ ತೆರೆ ಹಂಚಿಕೊಂಡ ಪಾರ್ವತಿ, ಆ ಬಳಿಕ ‘ಪೃಥ್ವಿ’ ಸಿನಿಮಾದಲ್ಲೂ ನಟಿಸಿದರು. ಹಿಟ್ ಜೋಡಿಯೆಂದೇ ಗುರುತಿಸಿಕೊಂಡ ಪುನೀತ್–ಪಾರ್ವತಿ ಈ ಸಿನಿಮಾಗೆ ಮತ್ತೆ ಒಂದಾದರು
ಈಗ ಪಾರ್ವತಿ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಆಯ್ದ ಕೆಲವೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪಾರ್ವತಿ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಮೊದಲಿಗಿಂತ ದಪ್ಪ ಆಗಿದ್ದಾರೆ ಎಂಬ ಕಾರಣಕ್ಕೆ ಕೇರಳಿಗರಿಂದಲೇ ಬಾಡಿ ಶೇಮಿಂಗ್ ಮತ್ತು ಹೇಟ್ ಮೆಸೇಜ್ಗಳು ಹರಿದು ಬರುತ್ತಿವೆ. ಇದನ್ನೂ ಓದಿ: ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ, ರಾಜಕೀಯದಲ್ಲಿ ಏಳು ಬೀಳು ಸಹಜ: ಡಿಕೆಶಿ
ಲುಕ್ ವಿಚಾರ ಇಟ್ಟುಕೊಂಡು ನಟಿಯರ ಮೇಲೆ ಟೀಕೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮೊದಲು ಕೂಡ ಪಾರ್ವತಿ ಮೆನನ್ ಇದೇ ರೀತಿಯ ಟೀಕೆಗಳನ್ನು ಎದುರಿಸಿದ್ದ ಉದಾಹರಣೆಗಳಿವೆ. ಆದರೆ ಇಂತಹ ನಕಾರಾತ್ಮಕ ಮಾತುಗಳಿಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
