ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ರಚಿತಾರಾಮ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಇತ್ತೀಚಿಗಷ್ಟೇ ತೆರೆ ಕಂಡಿದ್ದು, ಈ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ರಚಿತಾ ರಾಮ್ ಅವರು ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ನಿಂಗವ್ವ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
‘ಲ್ಯಾಂಡ್ಲಾರ್ಡ್’ ಸಿನಿಮಾದ ಖುಷಿಯನ್ನು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, ಈ ಸಂದರ್ಭದಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದು, ಈ ವರ್ಷವೇ ಮದುವೆಯಾಗುವುದು ಎಂದು ಖಚಿತಪಡಿಸಿದ್ದಾರೆ.
ಹೌದು, ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ರಚಿತಾ ರಾಮ್ ಅವರಿಗೆ ನಿಂಗವ್ವ ಎಂಬ ಪಾತ್ರ ಇದೆ. ಆ ಪಾತ್ರವನ್ನು ನೋಡಿದ ಮೇಲೆ ನಿಮಗೆ ಮದುವೆ, ಮಕ್ಕಳು ಮಾಡಿಕೊಳ್ಳಬೇಕು ಎನಿಸಿದೆಯಾ ಎಂಬ ಪ್ರಶ್ನೆಗೆ ರಚಿತಾ ಉತ್ತರಿಸಿದ್ದಾರೆ. ‘ಮದುವೆಗೆ ಈ ವರ್ಷ ಪ್ಲ್ಯಾನ್ ಮಾಡುತ್ತಿದ್ದೇನೆ. ಯಾವಾಗ ಆಗಬೇಕೋ ಆವಾಗಲೇ ಅದು ಆಗೋದು. ಯಾರು ನಮ್ಮ ಜೀವನದಲ್ಲಿ ಬರಬೇಕು ಅಂತ ಇರುತ್ತದೋ ಅವರೇ ಬರೋದು ಎಂದು ಹೇಳಿದ್ದಾರೆ.. ನಿಂಗವ್ವ ಪಾತ್ರ ತನ್ನ ಕುಟುಂಬವನ್ನು ನೋಡಿಕೊಳ್ಳುವ ಗುಣವನ್ನು ಎಲ್ಲ ಹೆಣ್ಮಕ್ಕಳು ಅಳವಡಿಸಿಕೊಳ್ಳಬೇಕು’ ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ. ಇದನ್ನೂ ಓದಿ: ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ
