ಬೆಂಗಳೂರು: ಮೂಡ ಪ್ರಕಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ತನಿಖೆ ನೀಡೆಸಿದ ನಂತರ ಕ್ಲೀನ್ ಚೀಟಿ ನೀಡಿದ್ದು, ಇದೀಗ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಬೆಂಗಳೂರಿನ ಭಗವಾನ್ ಶ್ರೀ ಮಾರುತಿ ಮಂದಿರ ಪ್ಯಾಲೆಸ್ ರಸ್ತೆ ಬಾಲ ಬ್ರುಹಿ ಅತಿಥಿ ಗೃಹ ಹತ್ತಿರ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಹಿಡಿದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿ ರವರ ಸಹೋದರ ಶ್ರೀಮತಿ ಪಾರ್ವತಿ ರವರಿಗೆ ಉಚಿತವಾಗಿ ನೀಡಿದ್ದ ಭೂಮಿಯ ಬಗ್ಗೆ ಸುಳ್ಳು ಆರೋಪ ಮಾಡಿ ಸ್ನೇಹಮಹಿ ಕೃಷ್ಣ ಪ್ರಕರಣ ದಾಖಲಿಸಿದ್ದರು, ಈ ಪ್ರಕರಣವನ್ನು ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತರು ತನಿಖೆ ನಡೆಸಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕುಟುಂಬದ ವಿರುದ್ಧ ಯಾವುದೇ ಸಾಕ್ಷಿಯ ಉರುಳಿಲ್ಲ ಎಂಬ ವರದಿ ನೀಡಿತ್ತು,ಮತ್ತೆ ಈ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದರ ಮೂಲಕ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ತನಿಖೆ ನೀಡಿದ ಕ್ಲೀನ್ ಚಿಟ್ ಬಗ್ಗೆ ಸ್ನೇಹಮಹಿ ಕೃಷ್ಣ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ಸಿದ್ದರಾಮಯ್ಯನವರ ಪರವಾಗಿ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದ ಹಿನ್ನೆಲೆಯಲ್ಲಿ ಹಾಗೂ ಪ್ರಕರಣದ ತನಿಖೆಯಲ್ಲಿ ಸಿದ್ದರಾಮಯ್ಯನವರ ಕುಟುಂಬದ ಯಾವುದೇ ಸದಸ್ಯರ ಹತ್ತಕ್ಷೇಪವಿಲ್ಲ ಎಂಬುದನ್ನ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಇಂದು ಶ್ರೀ ಭಗವಾನ್ ಮಾರುತಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನ ಏರ್ಪಡಿಸಿ ಸಿದ್ದರಾಮಯ್ಯನವರಿಗೆ ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾಳೆ ಸಾರಿಗೆ ನೌಕರರಿಂದ ಬೃಹತ್ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವುದರ ಮೂಲಕ ಪರಿಶುದ್ಧ ನಾಯಕರು ಸಿದ್ದರಾಮಯ್ಯನವರು ಎಂಬುದನ್ನು ಮತ್ತೊಮ್ಮೆ ನ್ಯಾಯಾಲಯದ ಆದೇಶದಿಂದ ಸಾಬೀತಾಗಿದೆ ಎಂದು ಘೋಷಣೆಗಳನ್ನು ಕೂಗಿ ಹರ್ಷೋದ್ದರ ವ್ಯಕ್ತಪಡಿಸಿದರು.
