ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 15 ಪ್ರಮುಖ ರಸ್ತೆಗಳಲ್ಲಿ ಇಂದು (ಭಾನುವಾರ ಜ. 18) ಬೆಳಿಗ್ಗೆಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ತಿಳಿಸಿದ್ದಾರೆ.
ಸಿ.ವಿ. ರಾಮನ್ ನಗರ ಕ್ಷೇತ್ರದ- ವಾರ್ಡ್-114 ಮತ್ತು 80 ರ ವ್ಯಾಪ್ತಿಯ ಚನ್ನಸಂದ್ರ ಮುಖ್ಯ ರಸ್ತೆ, ಇಂದಿರಾನಗರ 6ನೇ ಮುಖ್ಯ ರಸ್ತೆ, 80 ಅಡಿ ರಸ್ತೆ ಮತ್ತು 12ನೇ ಮುಖ್ಯ ರಸ್ತೆ, ಕಸ್ತೂರಿನಗರ 2ನೇ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.
ಚಿಕ್ಕಪೇಟೆ ಕ್ಷೇತ್ರದ ವಾರ್ಡ್-119 ವ್ಯಾಪ್ತಿಯ ಎನ್.ಆರ್. ರಸ್ತೆ, ಮೋತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.
ಶಾಂತಿನಗರ ಕ್ಷೇತ್ರದ ವಾರ್ಡ್-111 ರ ವ್ಯಾಪ್ತಿಯ ಮದರ್ ತೇರೆಸಾ ರಸ್ತೆಯಲ್ಲಿ ಹಾಗೂ ಎಂ.ಜಿ. ರಸ್ತೆಗಳಲ್ಲಿ ಮತ್ತು ಸುತ್ತಮುತ್ತಲಿನ ರಸ್ತೆ. ಇದನ್ನೂ ಓದಿ: ಬಿಜೆಪಿಯದ್ದು ಗೂಂಡಾ ಸಂಸ್ಕೃತಿ, ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ: ಸಿಎಂ
ಗಾಂಧಿನಗರ ಕ್ಷೇತ್ರದ ಕಾಟನ್ ಪೇಟೆ ವಾರ್ಡ್-120 ವ್ಯಾಪ್ತಿಯ ಶಾಂತಲಾ ಶಿಲ್ಕ್ ಸಿಗ್ನಲ್ ನಿಂದ ಕಾಟನ್ ಪೇಟೆ, ಪೊಲೀಸ್ ರಸ್ತೆ ವರೆಗೆ ಮತ್ತು ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯ ಛಲವಾದಿಪಾಳ್ಯ ಮುಖ್ಯ ರಸ್ತೆ ಮತ್ತು ಬಾಳೆಕಾಯಿ ಮಂಡಿ ಆವರಣದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ.
ಶಿವಾಜಿನಗರ ಕ್ಷೇತ್ರದ ಚರ್ಚ್ ರಸ್ತೆ, ಎಂ.ಎಂ. ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
