ಬೆಂಗಳೂರು: ಅಮೆರಿಕಾದಲ್ಲಿ ನಡೆಯುವ ಅತಿದೊಡ್ಡ ಸನ್ಡಾನ್ಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಈ ಕಿರುಚಿತ್ರ ಪಾತ್ರವಾಗಿದ್ದು, ಚಿತ್ರದಲ್ಲಿ ನಟಿಸಿದ ತಾಯಿ ಹಾಗೂ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಬೊಮ್ಮನಹಳ್ಳಿಯ ಅಗರ ಶಾಲೆಗೆ ಆಗಮಿಸಿ ನಿರ್ದೇಶನ ಮಾಡಿದ ವಿದ್ಯಾರ್ಥಿನಿ ಅನೂಯ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿರುಚಿತ್ರದ ಮೂಲಕ ಬಾರಿ ಸದ್ದು ಮಾಡುತ್ತಿದ್ದಾರೆ. ಪಂಕಜ ಎಂಬ ಕಿರುಚಿತ್ರವನ್ನ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನಲ್ಲಿನ ಅಗರದಲ್ಲಿ ಹುಟ್ಟಿ ಬೆಳೆದ ಅನೂಯಾ ಸ್ವಾಮಿ ರಚಿಸಿ ನಿರ್ದೇಶನ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಪತ್ರಿಕೋದ್ಯಮ, ಸಿನಿಮಾ ಬಗ್ಗೆ ಪದವಿ ಓದುತ್ತಿರುವ ಅನೂಯಾಸ್ವಾಮಿ ತಾಯ್ನಾಡಿನಲ್ಲಿಯೇ ಕಿರುಚಿತ್ರ ಮಾಡಬೇಕೆಂದು ಬೆಂಗಳೂರಿಗೆ ಆಗಮಿಸಿ ಅಗರದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮೂರನೇ ತರಗತಿ ವಿಧ್ಯಾರ್ಥಿನಿ ಪದ್ಮಶ್ರೀಯನ್ನ ಭೇಟಿ ಮಾಡಿ ಸಿನಿಮಾಗೆ ಆಯ್ಕೆ ಮಾಡಿದ್ದು, ಅದರಂತೆಯೇ ಬಾಲಕಿಯ ತಾಯಿ ಪಾತ್ರಕ್ಕೆ ಹರ್ಷಣಿ ಎಂಬ ನಟಿಯನ್ನು ಆಯ್ಕೆ ಮಾಡಿ ಪಂಕಜ ಸಿನಿಮಾವನ್ನು ಮಾಡಿದ್ದಾರೆ. ಕಿರುಚಿತ್ರ ಪಂಕಜದಲ್ಲಿ ಆಘಾತ, ದುಂಖ ಮತ್ತು ಅಸ್ಪಷ್ಟತೆಯಂತಹ ವಿಷಯಗಳು ಒಳಗೊಂಡಿದೆ. ಇದೀಗ ಈವೊಂದು ಕಿರುಚಿತ್ರ ಅಮೆರಿಕಾದ ಅತಿದೊಡ್ಡ ಸನ್ಡಾನ್ಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊಲದ ಕನ್ನಡ ಕಿರುಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚೊಚ್ಚಳ ಸಿನಿಮಾ ಮೂಲಕ ಈವೊಂದು ಸಾಧನೆ ಮಾಡಿದ ನಿರ್ದೇಶಕಿ ಅನೂಯಾ ಸ್ವಾಮಿ ಕನ್ನಡ ನಾಡಿಗೆ ಹೆಮ್ಮೆತಂದಿದ್ದಾರೆ.
ಬೆಂಗಳೂರಿನ ಅಗರ, ಮಲ್ಲೇಶ್ವರಂ, ಹೆಚ್.ಎಸ್‌ಆರ್ ಲೇಔಟ್, ಪೊಲೀಸ್ ಸ್ಟೇಷನ್, ಕಲ್ಲು ಕ್ವಾರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಸುಮಾರು ಐವತ್ತಕ್ಕೂ ಅಧಿಕ ಮಂದಿ ಪಂಕಜ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಮೆರಿಕಾದ ಅತಿದೊಡ್ಡ ಸನ್ಡಾನ್ಸ್ ಚಲನಚಿತ್ರೋತ್ಸವ ಪಂಕಜ ಸಿನಿಮಾ ಆಯ್ಕೆಯಾಗಿದ್ದು, ಚಿತ್ರದಲ್ಲಿ ನಟನೆ ಮಾಡಿದ ಹೆಚ್.ಎಸ್.ಆರ್ ಲೇಔಟ್ ನ ಅಗರ ಸರ್ಕಾರಿ ಶಾಲೆಯ ಬಾಲಕಿ ಪದ್ಮಶ್ರೀಗೆ ಚಿತ್ರತಂಡ ಸನ್ಮಾನಿಸಿ ಸಿಹಿ ತಿನ್ನಿಸಿ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಕಿರುಚಿತ್ರವನ್ನ ವೀಕ್ಷಣೆ ಮಾಡಿದರು. ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ, ನಮ್ಮ ಚಿತ್ರ ಅಮೆರಿಕಾದಲ್ಲಿ ಪ್ರದರ್ಶನಗೊಳ್ಳುತ್ತಿರೋದು ಖುಷಿ ತಂದಿದೆ ಎಂದು ಬಾಲನಟಿ ಪದ್ಮಶ್ರೀ ಸಂತಸ ಹಂಚಿಕೊಂಡಿದ್ದಾರೆ.
ಕನ್ನಡದ ಮೊಟ್ಟ ಮೊಲದ ಕಿರುಚಿತ್ರ ಪಂಕಜ ಅಮೆರಿಕಾದ ಅತಿದೊಡ್ಡ ಸನ್ಡಾನ್ಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತಾರಾಷ್ಟೀಯ ಮಟ್ಟದಲ್ಲಿ ಈ ಚಿತ್ರ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಚಿತ್ರತಂಡಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿ
