ಬೆಂಗಳೂರು: ಪೂಜ್ಯ ಗುರುದೇವ ಶ್ರೀ ಶ್ರೀ ರವಿ ಶಂಕರರ ದಿವ್ಯ ಸಾನಿಧ್ಯದಲ್ಲಿ ಮಕರ ಸಂಕ್ರಾಂತಿಯ ಮಹಾಸತ್ಸಂಗ ಕಾರ್ಯಕ್ರಮವನ್ನ ಇದೇ ಜನವರಿ 10ನೇ ತಾರೀಖಿನಂದು ಶನಿವಾರ ಸಂಜೆ 6 ಗಂಟೆಗೆ ಶ್ರೀ ರವಿಶಂಕರ್ ಗುರೂಜಿ ಅವರ ಸಾನ್ಥ್ಯದಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕರಾದ ಎಮ್ ಸತೀಶ್ ರೆಡ್ಡಿ ಹೇಳಿದರು
ಈ ಕುರಿತು ಇಂದು (ಗುರುವಾರ ಜ. 08) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಇನ್ನು ಪ್ರಮುಖವಾಗಿ ಈ ಕಾರ್ಯಕ್ರಮ ಉದ್ದೇಶವೇನೆಂದರೆ, ಉತ್ತಮ ಆರೋಗ್ಯ, ಆಂತರಿಕ ಶಾಂತಿ ಮತ್ತು ಮಾದಕದ್ರವ್ಯ ವ್ಯಸನರಹಿತ ಸಮಾಜದತ್ತ ಎಂದು ಹೇಳಿದರು. ಬೆಂಗಳೂರು ನಗರದಲ್ಲಿರುವ ಜನರು ಉದ್ಯೋಗದ ಅವಸರದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡದೆ, ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರಿ ನಗರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿರುವುದರಿಂದ ಯುವಕ ಯುವತಿಯರು ಬಲಿಯಾಗುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡ್ರಗ್ಸ್ ಹಾಗೂ ಗಾಂಜಾದ ಹಾವಳಿ ಜಾಸ್ತಿಯಾಗುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸದಿದ್ದರೆ, ಯುವಕರೇ ನಾಳಿನ ದೇಶದ ಸಂಪತ್ತು ಎಂಬುದನ್ನ ನಾವು ಮರೆಯಬೇಕಾಗುತ್ತದೆ. ಆದ್ದರಿಂದ ಶ್ರೀ ರವಿ ಶಂಕರ ರವರ ಕಡೆಯಿಂದ ಯುವಕರಿಗೆ ಒಂದು ಒಳ್ಳೆಯ ಸಂದೇಶ ರವಾನಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಗುರುಜಿಯವರಿಂದ 175ಕ್ಕೂ ಹೆಚ್ಚು ದೇಶಗಳಲ್ಲಿ ಅವರ ಸತ್ಸಂಗವನ್ನು ಮಾಡಿದ್ದಾರೆ. ಅಲ್ಲದೆ ಇವರು ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ಅನೇಕ ದೇಶಗಳಲ್ಲಿ ಶಾಂತಿಯನ್ನು ತರುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲೂ ಕೂಡ ಅವರ ಮೂಲಾಶ್ರಮ ಇರುವುದರಿಂದ ನಾನು ಹಲವು ದಿನಗಳಿಂದ ಅವರಿಗೆ ಕೇಳುತ್ತಿದ್ದೆ, ನಮ್ಮ ಕ್ಷೇತ್ರದಲ್ಲೂ ಕೂಡ ಸತ್ಸಂಗ ಆಗಬೇಕೆಂದು ಕೇಳಿದೆ ಅದಕ್ಕೆ ಒಪ್ಪಿ ಅವರು ಇದೇ ಜನವರಿ 10ರಂದು ಸತ್ಸಂಗ ಕಾರ್ಯಕ್ರಮ ಮಾಡಲು ಒಪ್ಪಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ವಿಮಾನ ನಿಲ್ದಾಣದ ವಿರುದ್ಧ ಸಾರಿಗೆ ಸಚಿವರು ಗರಂ ಆಗಿದ್ಯಾಕೆ..?
ಪ್ರಮುಖವಾಗಿ ಹೆಚ್ಎಸ್ಆರ್ ಬಡಾವಣೆಯಲ್ಲಿ ಈ ಕಾರ್ಯಕ್ರಮವನ್ನು ಮಾಡುತ್ತಿರುವ ಉದ್ದೇಶ ಎಂದರೆ, ಇಲ್ಲಿ ಹಲವಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿಕಾರ್ಮಿಕರು ಸೇರಿದಂತೆ ಗಾರ್ಮೆಂಟ್ಸ್ ಕಾರ್ಮಿಕರು ಇರುವುದರಿಂದ ಅವರಿಗೆ ಒಳಿತಾಗಲೆಂದು ಈ ಕಾರ್ಯಕ್ರಮವನ್ನು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.
