ಶಹಾಪುರ: ಕೇಂದ್ರ ಸರ್ಕಾರ ಈಗಾಗಲೇ ತಳವಾರ ಸಮುದಾಯಕ್ಕೆ ಪರಿಶಿಷ್ಠ ಪಂಗಡ (ಎಸ್.ಟಿ) ಜಾತಿ ಪ್ರಮಾಣ ಪತ್ರ ನೀಡಲು ನಾಯ್ಕಡಿ, ನಾಯಕ, ಚೊಲಿವಲ್ ನಾಯಕ, ಕಪಾಡಿಯ ನಾಯಕ, ಮೋಟೊ ನಾಯಕ್, ನಾನಾ ನಾಯಕ, ನಾಯಕ, ಬೇಡ, ಬೇಡರ ಮತ್ತು ವಾಲ್ಮೀಕಿ ಜಾತಿಗಳ ಜೊತೆಗೆ ಅದೇ ಜಾತಿಯ ಪರಿವಾರ ಮತ್ತು ತಳವಾರ ಜಾತಿಗಳಿಗೆ ಪ.ಪಂಗಡ ಸೌಲಭ್ಯಗಳನ್ನು ವಿಸ್ತರಿಸಬಹುದಾಗಿದೆ ಎಂದು ತಿಳಿಸಿದೆ. ಆದರೆ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ, ಒತ್ತಡಗಳಿಗೆ ಮಣಿದು ಗೊಂದಲ ಸೃಷ್ಠಿಸಿ ಪರಿವಾರ ಮತ್ತು ತಳವಾರ ಸಮುದಾಯಕ್ಕೆ ಎಸ್.ಟಿ ಪ್ರಮಾಣ ಪತ್ರವನ್ನು ನೀಡುವಲ್ಲಿ ಮೀನಾಮೇಷ ತೋರಿಸುತ್ತಿದ್ದಾರೆ ಎಂದು ತಳವಾರ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು (ಶನಿವಾರ ಜ. 03) ಸುದ್ದಿಗೋಷ್ಠಿ ನಡೆಸಿ ತಳವಾರ ಸಮಾಜದ ಜಿಲ್ಲಾಧ್ಯಕ್ಷ ಭಾಗೇಶ ಏವೂರ ಮಾತನಾಡಿ, ಕಳೆದ 2010 ರಲ್ಲಿ ಕುಲ ಅಧ್ಯಾಯ ಮಾಡಿ ಅಂದು ಕಲಬರ್ಗಿ ಜಿಲ್ಲೆಯಲ್ಲಿದ್ದ ಒಟ್ಟು 28800 ನೂರು ತಳವಾರರು ಇಂದು ಅವಿಭಾಜಿತ ಜಿಲ್ಲೆಯಾದ ಯಾದಗಿರಿಯಲ್ಲಿ ಗಣನಿಯವಾಗಿ ತಳವಾರ ಸಮುದಾಯಗಳಿದ್ದು ಅವರಿಗೆ ಇನ್ನೂ ಎಸ್,ಟಿ, ಪ್ರಮಾಣ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ, 2020 ಮಾರ್ಚ 9ರಂದು ಭಾರತ ಸರ್ಕಾರ ಗೆಜೆಟ್ ಪಾಸ್ ಮಾಡಿ ಅದರಲ್ಲಿ ನಾಯಕಡ್ ಎಂದು ನಮೂದಿಸಲಾಗಿದೆ, ಜಿಲ್ಲೆಯಲ್ಲಿ ಒಟ್ಟು 570 ಜನರಿಗೆ ತಳವಾರ ಸಮಾಜದವರಿಗೆ ಎಸ್,ಟಿ, ಪ್ರಮಾಣ ನೀಡಿದೆ, ಆದರೆ ಅವರ ಕುಟುಂಬ ಮಕ್ಕಳಿಗೆ ಪತ್ನಿಯವರಿಗೆ ಎಸ್. ಟಿ, ಸರ್ಟಿಪಿಕೇಟ್ ನೀಡುವಲ್ಲಿ ಕಾಲಹರಣ ನಡೆಯುತ್ತಿದೆ. ತಳವಾರ ಮತ್ತು ಪರಿವಾರ ಅಂತ ಬಳಕೆ ಮಾಡಿ ಇಡೀ ರಾಜ್ಯದಲ್ಲಿನ ತಳವಾರ ಸಮುದಾಯದ ಜನರಿಗೆ ಎಸ್.ಟಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಕೊಡದಂತೆ ಗೊಂದಲ ಸೃಷ್ಠಿಸಿದ್ದಾರೆ.
ತಳವಾರ ಸಮುದಾಯ ಇರುವುದು ಒಂದೇ, ಇದರಲ್ಲಿ ಗೊಂದಲ ಬೇಡ. ಇದರಿಂದ ತಳವಾರ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಆದೇಶದನ್ವಯ ಜಾತಿ ಪ್ರಮಾಣ ಪತ್ರವನ್ನು ನೀಡಿದರೆ, ಅನುಕೂಲವಾಗುತ್ತದೆ. ರಾಜ್ಯ ಸರ್ಕಾರವು ನಮ್ಮ ಸಮುದಾಯವನ್ನು ಆರ್ಥಿಕ , ಸಾಮಾಜಿಕ ಮತ್ತು ಶೈಕ್ಷಣೀಕವಾಗಿ ಮೇಲಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ತುಂಬಾ ಇರುವ ನೈಜ ತಳವಾರ ಸಮುದಾಯಕ್ಕೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿದ್ದು ಅಧಿಕಾರಿಗಳು ಗೊಂದಲ ಸೃಷ್ಠಿಸಿದ್ದಾರೆ.
ನಾಯ್ಕಡ, ನಾಯಕ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ಜಾತಿಗಳನ್ನು ಒಳಗೊಂಡಂತೆ ಪರಿಶಿಷ್ಠ ಪಂಗಡಕ್ಕೆ ಸೇರಿದ್ದು, ಈ ಜಾತಿಯ ಜನರಿಗೆ ಪರಿಶಿಷ್ಠ ವರ್ಗದ ಜಾತಿ ಪ್ರಮಾಣ ಪತ್ರವನ್ನು ನೀಡಬಹುದು ಎಂದು ತಿಳಿಸಿದ್ದು, ಹಿಂದುಳಿದ ವರ್ಗದಲ್ಲಿಯೂ ಸಹ ತಳವಾರ ಮತ್ತು ಪರಿವಾರ ಜಾತಿಗಳು ಇದ್ದು, ಇಂತಹವರಿಗೆ ಪರಿಶಿಷ್ಠ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲು ಅವಕಾಶವಿರುವುದಿಲ್ಲ ಎಂದು ಹೇಳಿ ಗೊಂದಲ ಸೃಷ್ಠಿಸಿದ್ದು, ಇದನ್ನು ಸರಿಪಡಿಸಿ ಸರ್ಕಾರದ ಆದೇಶದ ಪ್ರಕಾರ ಎಸ್.ಟಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಸುಳ್ಳು ಹೇಳಿ ಬಡವರ ತಪ್ಪಿಸುತ್ತಿದೆ: ಬೊಮ್ಮಾಯಿ
ಈ ಸಂದರ್ಭದಲ್ಲಿ ಸಿದ್ದಣ್ಣ ಎಮ್, ಐರೋಡಗಿ, ಪರಮಾನಂದ ತಳವಾರ, ಶರಣು ದೇವರಮನಿ, ದೇವಿಂದ್ರಪ್ಪ ಚಾಕ್ರಿ, ಮಲ್ಲು ತಳವಾರ, ಅನಿಲ ತಳವಾರ, ಮಲ್ಲಿಕಾರ್ಜುನ ತಳವಾರ, ಯಲ್ಲಪ್ಪ ತಳವಾರ, ಸಂತೋಷ ತಳವಾರ, ರಾಮರೆಡ್ಡಿ ತಳವಾರ, ಧರ್ಮಣ್ಣ ತಳವಾರ, ಅಮಲ್ಲಪ್ಪ ಸುರಪುರ, ಗೋವಿಂದರಾಜ ಸುರಪುರ ಸೇರಿದಂತೆ ಇತರರು ಇದ್ದರು.
