ಅಥಣಿ: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಪುತ್ರ ಚಿದಾನಂದ ಸವದಿ ಡಿಸಿಸಿ ಬ್ಯಾಂಕ್ ಕಾರ್ಮಿಕ ಸಂಘದ ಅಧ್ಯಕ್ಷರನ್ನು ತಮ್ಮ ಮನೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಕಾರ್ಮಿಕ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಅವರು ಆರೋಪಿಸಿದ್ದಾರೆ.
ಇಂದು (ಶನಿವಾರ ಜ. 03) ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದ್ದು, ನಿಂಗಪ್ಪ ಅವರನ್ನು ತಮ್ಮ ಮನೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಲಕ್ಷ್ಮಣ್ ಸವದಿ ಅವರು ನನ್ನನ್ನು ಅವರ ಮನೆಗೆ ಕರೆಸಿ, ಹಠತ್ತಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಲಕ್ಷ್ಮಣ ಸವದಿ ಮತ್ತು ಚಿದಾನಂದ ಸವದಿ ಎಂದು ಆರೋಪ ಮಾಡುತ್ತಿರುವ ನಿಂಗಪ್ಪ ಕರೆಣ್ಣವರ.
ತಲೆಗೆ ಬಲವಾಗಿ ಹೊಡೆದಿರುವುದರಿಂದ ತಲೆ ಒಡೆದು ರಕ್ತ ಸುರಿಯುತ್ತಿದೆ. ದಾಳಿಯಲ್ಲಿ ಅಧ್ಯಕ್ಷ ನಿಂಗಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಯಾರ್ ಗನ್ ನಿಂದ ಫೈರ್ ಆಗಿದೆ ಅಂತ ತನಿಖೆ ಆದ್ಮೇಲೆ ಗೊತ್ತಾಗುತ್ತೆ: ಸಿಎಂ
ಇನ್ನು ಆರೋಪವನ್ನು ತಳ್ಳಿಹಾಕಿದ ಲಕ್ಷ್ಮಣ ಸವದಿ ಇದಕ್ಕು ನಮಗು ಯಾವುದೆ ಸಂಬಂದ ಇಲ್ಲ. ಕಾರ್ಯಕರ್ತರು ಮತ್ತು ನಿಂಗಪ್ಪ ಕರೆಣ್ಣವರ ನಡುವೆ ನಡೆದ ಮಾತಿನ ಚಕಮಕಿ ಮಾತ್ರ ಎಂದ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಿಂಗಪ್ಪ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
