ಬೆಂಗಳೂರು: ಶ್ರೀವಾಸವಿ ಪುಡ್ಸ್ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದಿನಿಂದ (ಶನಿವಾರ ಡಿ. 27) ಜನವರಿ 4ರವರೆಗೆ ಆಯೋಜಿಸಿರುವ 26ನೇ ವರ್ಷದ ಅವರೆಬೇಳೆ ಮೇಳವನ್ನು ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿದರು.
ಅವರೆಕಾಳು ಮೇಳ ಉದ್ದೇಶಿಸಿ ಮಾತನಾಡಿದ ಅವರು, ರೈತರು ಬೆಳೆದ ಅವರೆಕಾಯಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಜೊತೆಗೆ ಅವರೆಕಾಯಿಯಿಂದ ತಯಾರಿಸಲಾದ ವೈವಿಧ್ಯಮಯ ಹಾಗೂ ವಿಶಿಷ್ಟ ಆಹಾರ ಪದಾರ್ಥಗಳ ಮೂಲಕ ಬೆಂಗಳೂರು ನಗರದ ಆಹಾರ ಪ್ರಿಯರ ಮನಗೆಲ್ಲುತ್ತಿದೆ. ಇದನ್ನೂ ಓದಿ: ವೈಕುಂಠ ಏಕಾದಶಿಗೆ ಸಕಲ ಸಿದ್ಧತೆ
ಬೆಂಗಳೂರು ಸುತ್ತಮುತ್ತಲಿನ ರೈತರು ಬೆಳೆದಿರುವ ಅವರೆಕಾಯಿ ಸವಿಯನ್ನು ಸವಿಯಲು ಅನೇಕರು ಅವರೆಕಾಯಿ ಮೇಳಕ್ಕೆ ಆಗಮಿಸಿದ್ದಾರೆ. ಶ್ರೀವಾಸವಿ ಪುಡ್ಸ್ ನವರು ಕಳೆದ 25 ವರ್ಷದಿಂದ ಅವರೆಕಾಯಿ ಮೇಳವನ್ನು ಏರ್ಪಡಿಸಿ, ರೈತರು ಹಾಗೂ ಬೆಂಗಳೂರು ನಾಗರಿಕರು ಸೇರಿ ಸಂಭ್ರಮಿಸಲು ಅವಕಾಶವನ್ನು ಮಾಡಿದ್ದಾರೆ ಎಂದರು.
