ಬೆಂಗಳೂರು: ರಾಜ್ಯದಾದ್ಯಂತ ಇಂದು (ಗುರುವಾರ ಡಿಸೆಂಬರ್ 25) ʼ45 ʼ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸೆಂಚುರಿ ಸ್ಟಾರ್ ಶಿವಣ್ಣ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಅಭಿನಯವನ್ನು ಅಭಿಮಾನಿಗಳು ಕಣ್ತುಂಬಿಕೊಂಡು ಎಲ್ಲೆ ಸಂಭ್ರಮಾಚರಣೆ ಮಾಡಿದ್ದಾರೆ.
ಯೆಸ್…ತ್ರಿಮೂರ್ತಿಗಳ ಸಂಗಮವನ್ನ ತೆರೆಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಚಿತ್ರಮಂದಿರಲ್ಲಿ ಅದ್ದೂರಿ ಸೆಲಬ್ರೇಷನ್ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾರಥ್ಯದಲ್ಲಿ ಮೂಡಿಬಂದ 45 ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮೈಸಾ ಸಿನಿಮಾ; ಮಾಸ್ ಲುಕ್ಕಿನಲ್ಲಿ ರಶ್ಮಿಕಾ ಮಂದಣ್ಣ
ಮೂವರು ನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಂಡು ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಟ್ರೈಲರ್ ಮೂಲಕ ಕ್ಯೂರಿಯಾಸಿಟಿ ಹೆಚ್ಚಿಸಿದ್ದ `45′ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ಮಹಾಪೂರ ಹರಿಸಿದೆ. ಹೊಸ ರೀತಿಯ ಕಥೆಯನ್ನ ಹೊತ್ತುತಂದ `45′ ಸಿನಿಮಾ ಅಭಿಮಾನಿಗಳ ಮನಸ್ಸಿಗಿಳಿದಿದೆ. ಮೂವರು ನಟರು ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
