ಶಹಾಪುರ: ನಗರದ ಇಂದಿರಾನಗರದ ಹೊರವಲಯದಲ್ಲಿ ನೇಣು ಬಿಗಿದ ಸ್ಥೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ತಾಲೂಕಿನ ಗೋಗಿ (ಕೆ) ಗ್ರಾಮದ ಜಯಮ್ಮ ಗಂಡ ಪರಶುರಾಮ ಹೊಸ್ಮನಿ (35) ಎಂದು ಗುರುತಿಸಲಾಗಿದೆ.
ಈ ಕುರಿತು ನಗರ ಪೊಲೀಸರು ತನಿಖೆ ನಡೆಸಿದ್ದು, ಶವವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾವಿನ ಕುರಿತು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದು, ತನಿಖಾ ವರದಿಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.
ಕೊಲೆ ಶಂಕೆ
ಮೃತ ಜಯಮ್ಮಳ ಸಹೋದರ (ಅಣ್ಣ) ತಿಮ್ಮಯ್ಯ ಗುಂಕಲಗದೊಡ್ಡಿ ನನ್ನ ಸಹೋದರಿಯ ಸಾವಿನಲ್ಲಿ ಸಂಶಯವಿದೆ ಎಂದು ನಗರದ ಠಾಣೆಯಲ್ಲಿ ದೂರು ನೀಡಿದ್ದು, ಮೃತ ಜಯಮ್ಮಳಿಗೆ ಮೂರು ಜನ ಗಂಡು ಮಕ್ಕಳಿದ್ದು, ಕಳೆದ ಎರಡು ತಿಂಗಳಿನಿಂದ ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದಳು, ವಾಸಿಗಾಗಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಚಾರ ಮಾಡಿಸಲಾಗಿತ್ತು, ಸ್ವಲ್ಪ ದಿನ ಅರಾಮಾಗೆ ಇದ್ದಳು, ನಂತರ ನೋವು ತಾಳಲಾರದೇ ದುಃಖಿತಳಾಗಿ ಮೂಲವ್ಯಾದಿ ಕಾಯಿಲೆಯಿಂದ ತುಂಬಾ ನೋವಾಗುತ್ತಿದೆ ಎಂದು ಜೀವನ ನಡೆಸುವುದೇ ಬೇಡ ಅನಿಸುತ್ತಿದೆ ಸಾಯುವುದೇ ಮೇಲು ಅಂತಾ ತನ್ನ ದುಃಖವನ್ನು ನಮ್ಮ ಮುಂದೆ ಹೇಳಿಕೊಳ್ಳುತ್ತಿದ್ದಳು. ಇದನ್ನೂ ಓದಿ: ಶ್ರೀರಾಮನ ಹೆಸರನ್ನು ರಾಜಕೀಯಕ್ಕೆ ಬಳಸಬಾರದು: ಕೆಹೆಚ್. ಮುನಿಯಪ್ಪ
ನಾವು ಸಮಾಧಾನ ಪಡಿಸಿ ಆಗಾಗ ಆಸ್ಪತ್ರೆಗೆ ತೋರಿಸುತ್ತಿದ್ದೇವು. ಆದರೆ ಮಂಗಳವಾರ 12:30 ಗಂಟೆ ಸುಮಾರಿಗೆ ಮನೆಯಿಂದ ಹಣ ಡ್ರಾ ಮಾಡಿಕೊಂಡು ಬರುತ್ತೆನೆ ಎಂದು ಶಹಾಪರಕ್ಕೆ ಬಂದಿದ್ದು, ಸಾಯಂಕಾಲದವರೆಗೆ ಜಯಮ್ಮ ಮನೆಗೆ ಬಂದಿಲ್ಲಾ. ಇದರಿಂದ ಆತಂಕಗೊಂಡು ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಸಹ ಕಾಣೆಯಾದ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಹೀಗಿರುವಾಗ ಇಂದು (ಬುಧವಾರ ಡಿ.24) ರಂದು ಮುಂಜಾನೆ ಆತ್ಮಹತ್ಯೆಯ ಸ್ಥೀತಿಯಲ್ಲಿ ಶವ ಪತ್ತೆಯಾಗಿದ್ದು ನನ್ನ ತಂಗಿಯ ಸಾವಿನಲ್ಲಿ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
