ಶಹಾಪುರ: ಪ್ರಜಾಸೌಧ ನಿರ್ಮಾಣ ಗೊಂದಲಕ್ಕಿಡು ಮಾಡಿದ್ದು, ಕಾಲೇಜು ಶಿಕ್ಷಣಕ್ಕಾಗಿ ಕಾಯ್ದಿರಿಸಿದ ಜಮೀನುನಲ್ಲಿ ಕಟ್ಟಡ ಮಾಡುವದರಿಂದ ಮಕ್ಕಳ ವಿಧ್ಯಾಭ್ಯಾಸಗಳಿಗೆ ತೀವ್ರ ತೊಂದರೆಯಾಗುತ್ತದೆ. ಅಲ್ಲದೆ ಶಿಕ್ಷಣ ಅಭಿವೃದ್ದಿಗಾಗಿ ಮೀಸಲಿಟ್ಟಿದ್ದ ಜಮೀನು ಪರಬಾರೆ ಮಾಡುವುದರ ಕಾನೂನು ನೀತಿ ಉಲ್ಲಂಘನೆಯಾಗುತ್ತಿದ್ದರೂ, ಸ್ಥಳೀಯ ಆಡಳಿತ ಪ್ರಜಾಸೌಧ ಕಟ್ಟಡಕ್ಕೆ ಮುಂದಾಗಿದ್ದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ಡಿಗ್ರಿ ಕಾಲೇಜು ಎದುರಿನಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಮುಂದುವರೆಯಿತು. ಇದನ್ನೂ ಓದಿ: ಮೋದಿ ಸರ್ಕಾರ ರಾಜಕೀಯ ವಿರೋಧಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ: ಸಿಎಂ
ರೈತ ಮುಖಂಡರಾದ ಮಲ್ಲಣಗೌಡ ಪರಿವಾಣ ಮತ್ತು ಮಹೇಶಗೌಡ ಸುಬೇದಾರವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಮುಖಂಡ ಶಿವರಾಜ ದೇಶಮುಖ ಸೇರಿ ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು. ಈ ಪ್ರತಿಭಟನೆ ಪ್ರಜಾಸೌಧ ಸ್ಥಳಾಂತರದವರೆಗೂ ನಡೆಯುತ್ತದೆ ಯಾವುದೇ ಕಾರಣಕ್ಕೂ ಹಿಂಪಡೆಯೂ ಮಾತೆ ಇಲ್ಲಾ ಎಂದು ಮಹೇಶಗೌಡ ಸುಬೇದಾರವರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡರು, ಸೇರಿದಂತೆ ಕಾರ್ಯಕರ್ತರು ಇದ್ದರು.
