ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಮಾರ್ಕ ಸಿನಿಮಾ ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಚಿತ್ರತಂಡವು ಇದೀಗ ಮಸ್ತ್ ಮಲೈಕಾ ಎಂಬ ಸಾಂಗ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಹೌದು ಕಿಚ್ಚ ಸುದೀಪ್ ಹಾಗೂ ನಟಿ ನಿಶ್ಚಿಕಾ ನಾಯ್ಡು ಸೇರಿ ಸಕ್ಕತ್ ಸ್ಟೆಪ್ ಹಾಕುವ ಮೂಲಕ ಧೂಳ್ ಎಬ್ಬಿಸಿದ್ದಾರೆ. ಇದನ್ನೂ ಓದಿ: ಸೈಲೆಂಟಾಗಿ ಹಸೆ ಮಣೆ ಏರಿದ ಗುಂಡಮ್ಮ
ಅನೂಪ್ ಭಂಡಾರಿ ಮಸ್ತ್ ಮಲೈಕಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗೂ ನಕಾಶ್ ಅಜೀಜ್ ಇದನ್ನ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಮಾರ್ಕ್ ಚಿತ್ರವನ್ನ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಮ್ಯಾಕ್ಸ್ ಚಿತ್ರ ಆದ್ಮೇಲೆ ಈ ಒಂದು ಚಿತ್ರವನ್ನ ಸುದೀಪ್ ಜೊತೆಗೆ ಮಾಡಿದ್ದಾರೆ.
