ಶಹಾಪುರ: ಮತಕ್ಷೇತ್ರ ಅಷ್ಟೇ ಅಲ್ಲದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ದುರ್ಬಲ ವರ್ಗದ ಜನರ ಏಳ್ಗೆಗೆ ಶ್ರಮಿಸುತ್ತಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ರಾಜ್ಯ ನಿರ್ಧೇಶಕರು, ಸುವರ್ಣ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜೋಗಿ ಜಯಪ್ಪ ಶಿವಮೊಗ್ಗ ಹೇಳಿದರು.
ಖಾಸಗಿ ಕಾರ್ಯಕ್ರಮದ ಹಿನ್ನಲ್ಲೇ ನಗರಕ್ಕೆ ಆಗಮಿಸಿದ್ದ ವೇಳೆ ಬಾಪುಗೌಡ ನಗರದಲ್ಲಿ ಪ್ರಗತಿಯಲ್ಲಿರುವ ಕನಕ ಭವನ ಕಾಮಗಾರಿಯನ್ನು ವಿಕ್ಷೀಸಿ ಮಾತನಾಡಿದ ಅವರು ಸರಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಪ್ರತಿಯೊಂದು ಜನಾಂಗದವರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವ ವ್ಯಕ್ತಿತ್ವ ಅವರಿಗಿದ್ದು, ಪ್ರತಿ ಸಮುದಾಯಗಳಿಗೆ ಅನುದಾನ ಒದಗಿಸುವ ಮೂಲಕ ಎಲ್ಲಾ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದಾರೆ. ಕುರುಬ ಸಮಾಜದ ಮೇಲೆ ಹೆಚ್ಚು ಪ್ರೀತಿ, ಗೌರವವನ್ನು ಹೊಂದಿರುವ ಸಚಿವರು ಸಮುದಾಯದ ಅಭಿವೃದ್ಧಿಗೆ ಪೂರಕ ಕೆಲಸ ಮಾಡುತ್ತಿದ್ದಾರೆ. ಯಾವಾಗಲೂ ಕ್ಷೇತ್ರದ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳ ಕಡೆಗೆ ಹಚ್ಚಿನ ಗಮನಹರಿಸುವ ಇಂತಹ ರಾಜಕಾರಣಿಯನ್ನು ಪಡೆದ ಸಗರನಾಡಿನ ಜನರೇ ಧನ್ಯರು ಎಂದರು.
ಈ ಸಂದರ್ಭದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಲಿ ನಿರ್ಧೇಶಕ ಶಾಂತಗೌಡ ನಾಗನಟಿಗಿ, ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ, ಸುವರ್ಣ ಕರ್ನಾಟಕ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ಸಂಗಣ್ಣ ಸೈದಾಪುರ, ಬಸವರಾಜ ನಾಟೇಕರ, ಸೈದಪ್ಪ ಬಾಣತಿಹಾಳ, ಶರಣು ಸಗರ, ಮಹಾಂತೇಶ, ಶೇಖರ ಪಾಟೀಲ್ ಶಖಾಪುರ, ಪ್ರವೀಣ ಸೇರಿದಂತೆ ಇತರರು ಇದ್ದರು.
