ಶಹಾಪುರ: ನಗರದ ಬಸವೇಶ್ವರ ವೃತ್ತದಲ್ಲಿ ಕುರುಬ ಸಮಾಜದ ಮುಖಂಡರಿಂದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕುಪ್ಪಿ ಭೀಮ ದೇವರ ಮಹಾರಥ ಶತಮಾನೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ, ಮುತ್ತೈದೆಯರಿಗೆ ಉಡಿ ತುಂಬುವುದು ಕಾರ್ಯಕ್ರಮದ ನಿಮಿತ್ಯ ತೆರಳುತ್ತಿದ್ದ ಅವರನ್ನು ಸನ್ಮಾನಿಸಲಾಯಿತು.
ಬಳಿಕ ನಗರದಲ್ಲಿನ ಸಂಬಂಧಿಕರ ಗೃಹದಲ್ಲಿ ಉಪಹಾರ ಸೇವಿಸಿದ ಅವರು ಮಹಿಳೆಯರಿಂದ ಉಡಿ ತುಂಬಿಸಿಕೊAಡು ಕಾರ್ಯಕ್ರಮ ಹಿನ್ನಲೇ ಲಿಂಗಸುಗೂರಗೆ ತೆರಳಿದರು. ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಯಿಂದ ದಾಸನಿಗೆ ಬಿಗ್ ಶಾಕ್!
ಈ ಸಂದರ್ಭದಲ್ಲಿ ದೇವಿಂದ್ರಪ್ಪ ಮೇಟಿ, ಶರಣಬಸವ ಸೈದಾಪುರ, ಶರಬಣ್ಣ ರಸ್ತಾಪುರ, ದೇವಿಂದ್ರಪ್ಪ ಹತ್ತಿಗುಡೂರ, ಸೀನು ನಾಶಿ, ಹಣಮಂತ ವಿಭೂತಿಹಳ್ಳಿ, ಸಿದ್ದಣ್ಣ ಕನ್ಯಾಕೊಳ್ಳುರ, ಮಹೇಶ ಮೌರ್ಯ ಸೇರಿದಂತೆ ಯುವಕರು, ಅಭಿಮಾನಿಗಳು ಇದ್ದರು.
