Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಡಿ.10 ರಂದು ಅನಧೀಕೃತ ವಸತಿ, ಕೊಚೀಂಗ್ ಬಂದ್‌ಗೆ ಆಗ್ರಹಿಸಿ ಪ್ರತಿಭಟನೆ
  • State
  • ಶಹಾಪುರ

ಡಿ.10 ರಂದು ಅನಧೀಕೃತ ವಸತಿ, ಕೊಚೀಂಗ್ ಬಂದ್‌ಗೆ ಆಗ್ರಹಿಸಿ ಪ್ರತಿಭಟನೆ

Praja Vahini December 1, 2025
WhatsApp Image 2025-12-01 at 16.25.57
Spread the love

ಶಹಾಪುರ: ಅಕ್ರಮ ಹಾಗೂ ಅನಧೀಕೃತ ಶಾಲೆಗಳು, ವಸತಿ ಶಾಲೆಗಳು ಹಾಗೂ ಕೊಚಿಂಗ್ ಕೇಂದ್ರಗಳನ್ನು ಬಂದ್ ಮಾಡಿ, ಶಾಲಾ ಪರವಾನಿಗೆ ಪಡೆದುಕೊಂಡು ಅನಧೀಕೃತ ವಸತಿ ಶಾಲೆ ನಡೆಸುತ್ತಿರುವ ಶಾಲೆಗಳ ಮಾನ್ಯತೆ ರದ್ದುಗೊಳಿಸಲು ಆಗ್ರಹಿಸಿ ಡಿ.10 ರಂದು ನಗರದ ಬಿಇಓ ಕಚೇರಿ ಎದುರು ಅನಿರ್ಧಿಷ್ಠಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು ಡಿಡಿಪಿಐ ಅವರು ಸ್ಥಳಕ್ಕೆ ಬಂದು ಭರವಸೆಯ ಮಾತುಗಳನ್ನಾಡದೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಡಿಡಿಪಿಐ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನೆಲ್ಲೇಡೆ ನಾಯಿಕೊಡೆಗಳಂತ ತಲೆ ಎತ್ತಿರುವ ಅಕ್ರಮ, ಅನಧೀಕೃತ ಶಾಲಾ ಕೋಚಿಂಗ್‌ಗಳ ಬಂದ್‌ಗೆ ಆಗ್ರಹಿಸಿ ನಿರಂತರ ಹೋರಾಟಗಳು ನಡೆಯುತ್ತಿದ್ದು, ಈ ವರೆಗೆ ಕೇವಲ ನೋಟಿಸ್ ಜಾರಿ, ಸ್ಥಳ ಪರಿಶಿಲನೆಯಲ್ಲಿಯೇ ಕಾಲಹರಣವಾಗುತ್ತಿದ್ದು, ಕ್ರಮ ತೆಗೆದುಕೊಳ್ಳುವುದು ಯಾವಾಗ?. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದು, ಮೇಲಾಧಿಕಾರಿಗಳು ಮತ್ತು ತಾಲೂಕ ಅಧಿಕಾರಿಗಳ ದಿಗ್ಗು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಕಟ್ಟಡದಲ್ಲಿ ಪರವಾನಿಗೆ ಪಡೆದು, ಬೇರೆ ಕಟ್ಟಡದಲ್ಲಿ ಶಾಲೆ ನಡೆಸುವುದು, ಅನುಮತಿ ಪಡೆದ ತರಗತಿ, ಅನುಮತಿ ಪಡೆದ ಪಠ್ಯಕ್ರಮ ಇವೆಲ್ಲದರಲ್ಲೂ ಅಕ್ರಮ ನಡೆದಿವೆ ಮತ್ತು ಯಾವ ಶಾಲೆಯಲ್ಲಿಯೂ ಕನಿಷ್ಠ ಮೂಲಭೂತ ಸೌಲಭ್ಯವಿಲ್ಲ. ಇದನ್ನೂ ಓದಿ: ರಾಜಕೀಯ ದ್ವೇಷಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಕಿರುಕುಳ: ಡಿಕೆಶಿ

ಈ ಬಗ್ಗೆ 2024ರ ಆ.1 ರಂದು ಬಿಇಓ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಅಂದು ಉಪನಿರ್ಧೇಶಕರು ಲಿಖಿತ ಭರವಸೆ ನೀಡಿದ ಬಳಿಕ ಉಪವಾಸ ಸತ್ಯಾಗ್ರಹ ಹಿಂಪಡೆಯಲಾಗಿತ್ತು. ತದಾ ನಂತರ ಆ.5 ರಂದು ಸತ್ಯಾಗ್ರಹ ಮುಂದುವರೆಸಲಾಗಿತ್ತು. ಅಂದು ಸಹ ಡಿಡಿಪಿಐ ಅವರು ಲಿಖಿತ ಭರವಸೆ ನೀಡಿದ್ದರು. ಇದಾದ ನಂತರ ಬಿಇಓ ಅವರು ದಿ.21 ರಂದು ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ ನಂತರ ಯಾವುದೇ ಪ್ರಯೋಜನವಾಗಿಲ್ಲಾ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜು ಗುಂಡಗುರ್ತಿ ಇದ್ದರು.

ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ

ಅನಧೀಕೃತ ಶಾಲೆ, ಕೊಚಿಂಗ್, ವಸತಿಗಳನ್ನು ಮುಚ್ಚುವಂತೆ ಆಗ್ರಹಿಸಿ ಡಿ.10 ರಂದು ಹೋರಾಟ ಹಮ್ಮಿಕೊಂಡಿದ್ದು, ಅಂದಿನ ಹೋರಾಟಕ್ಕೆ ವಿವಿಧ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು ಸಹ ಬೆಂಬಲ ನೀಡಲಿದ್ದಾರೆ. ತಾಲೂಕಿನಲ್ಲಿ ಬಹುತೇಕ ಶಾಲೆಗಳು ಪರವಾನಗಿ ನವೀಕರಣಗೊಳ್ಳದೇ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಿಕೊಂಡಿದ್ದಾರೆ. ಶಾಲೆಗಳಲ್ಲಿ ದಾಖಲಾದ ಮಕ್ಕಳಿಗೆ 10ನೇ ತರಗತಿ ಪರಿಕ್ಷೇ ಕೂರಲು ಅವಕಾಶವಿಲ್ಲ. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಇಂತಹ ಶಾಲೆಗಳ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು  ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು.

About the Author

Praja Vahini

Editor

View All Posts

Spread the love

Post navigation

Previous: ರಾಜಕೀಯ ದ್ವೇಷಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಕಿರುಕುಳ: ಡಿಕೆಶಿ
Next: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!

Views:

63

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.