ಶಹಾಪುರ: ತಾಲೂಕಿನ ಮಕ್ತಾಪುರ ಗ್ರಾಮದ ಶಾಲಾ ಸಮಯಕ್ಕೆ ಬಸ್ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟವನ್ನು ಮಕ್ತಾಪುರ ಗ್ರಾಮಕ್ಕೆ ತೆರಳಿದ್ದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಗ್ರಾಮದ ಮುಖಂಡರು ಗಮನಕ್ಕೆ ತಂದಿದ್ದರು ಇದರ ಬೇನ್ನಲ್ಲೇ ಸಚಿವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದರು. ಅದರಂತೆ ಇಂದು (ಶನಿವಾರ ನ. 29) ನೂತನ ಬಸ್ ಗ್ರಾಮಕ್ಕೆ ಬಿಡಲಾಯಿತು.
ನಗರದಿಂದ ಹಾಲಭಾವಿ, ಮಕ್ತಾಪುರ, ಹೊತಪೇಠ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳು ನಿತ್ಯ ಕಾಲ್ನಿಡಿಗೆ ಮೂಲಕವೇ ನಗರಕ್ಕೆ ಬರುವ ಅನಿವಾರ್ಯತೆ ಇತ್ತು. ಈ ಬಗ್ಗೆ ಸಚಿವರು ಮುತುವರ್ಜಿ ವಹಿಸಿ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಗ್ರಾಮಸ್ಥರು, ವಿದ್ಯಾರ್ಥಿಗಳು ಸಚಿವರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಭಿನ್ನಾಭಿಪ್ರಾಯಗಳಿಗೆ ಬ್ರೇಕ್ ಹಾಕಿದ ಸಿಎಂ-ಡಿಸಿಎಂ
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾ ಪಟೇಲ ಮಕ್ತಾಫುರ, ಮಾನಪ್ಪ ಮಕ್ತಾಪುರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
