ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಮತ್ತಷ್ಟು ಕಠಿಣ ಶಿಕ್ಷೆ ಅನುಭವಿಸುವ ಸಂದರ್ಭ ನಿರ್ಮಾಣವಾಗಿದೆ.
ಹೌದು, ನಟ ದರ್ಶನ್ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಸರತಿ ಸಾಲಿನಲ್ಲಿ ನಿಂತು ಊಟ ಮಾಡುವ ಪರಿಸ್ಥಿತಿ ಜೈಲಿನಲ್ಲಿ ನಿರ್ಮಾಣವಾಗಿದೆ. ಎಲ್ಲ ಸಾಮಾನ್ಯ ಕೈದಿಗಳಿಗೂ ಹೇಗೆ ನಿಯಮ ಅನ್ವಯವಾಗುತ್ತದೆ ಅದೇ ರೀತಿ ದರ್ಶನ್ಗು ಕೂಡ ಜೈಲಿನ ಎಲ್ಲಾ ನಿಯಮಗಳು ಅನ್ವಯಿಸುತ್ತಿವೆ.
ಯೆಸ್..ಜೈಲು ಸೂಪರಿಂಟೆಂಡೆಂಟ್ ಆಗಿ ಇದೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ನೇಮಕಾತಿ ಆಗಿರೋ ಅಂಶುಕುಮಾರ್ ಮತ್ತಷ್ಟು ಹೊಸ ರೂಲ್ಸ್ ತಂದಿದ್ದಾರೆ. ಇಷ್ಟು ದಿನ ಬ್ಯಾರಕ್ ಅಲ್ಲಿ ಊಟ ಪಡೆದು ಊಟ ಮಾಡುತ್ತಿದ್ದ ದರ್ಶನ್ ಈಗ ಎಲ್ಲಾ ಆರೋಪಿಗಳಂತೆ ಸರತಿ ಸಾಲಿನಲ್ಲಿಯೇ ನಿಂತು ಊಟ ಪಡೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜೈಲಿನ ಕಳ್ಳಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲೇಬೇಕೆಂದು ತೀರ್ಮಾನ ಮಾಡಿ ಈಗ ಎಲ್ಲರಿಗೂ ಒಂದೇ ರೂಲ್ಸ್ ಮಾಡಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್: ವಿಜಯಲಕ್ಷ್ಮಿ ಹೆಸರು ಬಾಯ್ಬಿಟ್ಟಿ ಧನ್ವೀರ್!
ಇನ್ನು ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಸಿಕ್ಕಿದ್ದ ವಾಕಿಂಗ್ ಅವಕಾಶವನ್ನೂ ಕಡಿತಗೊಳಿಸಿದ್ದಾರೆ. ಬಟ್ಟೆ ತೊಳೆದು ಒಣ ಹಾಕೋಕೆ ಮಾತ್ರ ಸ್ವಲ್ಪ ಕಾಲಾವಕಾಶ ನೀಡಿದ್ದು, ಮತ್ಯಾವುದಕ್ಕೂ ಅವಕಾಶ ಇಲ್ಲದೇ ದರ್ಶನ್ ಪರದಾಡುವಂತೆ ಆಗಿದೆ.
