ಶಹಾಪುರ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಕೆಎಸ್ಆರಟಿಸಿ ಬಸ್ ಕಂಡಕ್ಟರ್ ಬಸ್ ಹತ್ತುತ್ತಿದ್ದ ವೇಳೆ ಆಯಾ ತಪ್ಪಿ ಬಿದ್ದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಸ್ ನಂ. ಕೆಎ 32 ಏಫ್ 1687 ನ ಬಸ್ ಚಾಲಕ ದಿಲೀಪನ ಅತಿ ವೇಗ ಹಾಗೂ ಬೇಜವಾಬ್ದಾರಿತನದಿಂದ ಬಸ್ ಹಿಂದಕ್ಕೆ ತೆಗೆದುಕೊಂಡು ಸುರಪೂರ ಕಡೆ ಹೋಗುವ ಅವಸರದಲ್ಲಿ ಕಂಡಕ್ಟರ್ ಬಸ್ ಹತ್ತುವ ವೇಳೆ ಅವಘಡ ಸಂಭವಿಸಿದ್ದು, ಸ್ಥಳದಲ್ಲೇ ಬಿದ್ದ ಕಂಡಕ್ಟರ್ ನ ಮೇಲೆ ಬಸ್ಸು ಹರಿಸಿದ್ದು ಕಂಡಕ್ಟರ್ ಮೃತ ಪಟ್ಟಿದ್ದಾನೆ.
ಬಾಬು ತಂದೆ ಭೀಮಶ ಡ್ಯೂಟಿಗಿ (45) ಮೃತ ದುರ್ದೈವಿಯಾಗಿದ್ದಾನೆ. ಕಲ್ಬುರ್ಗಿ ನಂ 1 ನ ಡಿಪೋ ನಿರ್ವಾಹಕ. ಬಸ್ ದೇಹದ ಮೇಲೆ ಹರಿದ ಪರಿಣಾಮ ಮೂಗಿನಿಂದ ರಕ್ತಸ್ರಾವವಾಗಿ. ಕೆಲ ಹೊತ್ತು ಒದ್ದಾಡಿದ್ದು ಬಳಿಕ ಅಲ್ಲಿದ್ದ ಸಾರ್ವಜನಿಕರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಂಡಕ್ಟರ್ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರೊನ್ನೋತರ ಪರೀಕ್ಷೆ ನಡೆಯಿತು. ಇದನ್ನೂ ಓದಿ: ಲಕ್ನೋ: ರಾಮಮಂದಿರದ ಮೇಲೆ ಮೋದಿ ಧ್ವಜಾರೋಹಣ
ಸ್ಥಳಕ್ಕೆ ಕೆಎಸ್ಆರಟಿಸಿ ಜಿಲ್ಲಾಧಿಕಾರಿ ಮಂಜುನಾಥ್, ಡಿ 2 ವಿ.ಆರ್ ರೆಡ್ಡಿ, ಡಿಪೋ ಮ್ಯಾನೇಜರ್ ರವಿಶಂಕರ್ ಪತಂಗೆ, ಲೇಬರ್ ಅಧಿಕಾರಿ ಬಂಗಾರಪ್ಪ ಕಟ್ಟಿಮನಿ ಭೇಟಿ ನೀಡಿ ಮೃತ ಕಂಡಕ್ಟರ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರ್ಕಾರದಿಂದ ಕೂಡಲೇ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ನನ್ನ ಗಂಡನ ಸಾವಿಗೆ ಕಾರಣನಾದ ಚಾಲಕ ದಿಲೀಪ್ ತಂದೆ ಜಗನ್ನಾಥ್ ಮಾನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತ ಕಂಡಕ್ಟರ್ ಪತ್ನಿ ದೂರು ದಾಖಲಿಸಿದ್ದಾರೆ.
