ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಅವರು ಇತ್ತೀಚೆಗೆ ಅವರ ಸ್ಥಿತಿ ಗಂಭೀರವಾದ ಕಾರಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಹೌದು, ಹಿರಿಯ ನಟ ಆಕ್ಷನ್ ಕಿಂಗ್ ಎಂದು ಖ್ಯಾತರಾದ ಧರ್ಮೇಂದ್ರ ಅವರು ದೀರ್ಘಕಾಲದ ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಇಂದು (ಸೋಮವಾರ ನ. 24) ಮುಂಬೈನ ನಿವಾಸದಲ್ಲಿ 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಆಸ್ಪತ್ರೆಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದ ಕಾರಣ ಕುಟುಂಬದವರು ಅವರನ್ನು ಡಿಶ್ಚಾರ್ಜ್ ಮಾಡಿ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದರು. ಆದರೆ ಇಂದು ಬೆಳಿಗ್ಗೆ ಆರೋಗ್ಯ ಸ್ಥಿತಿ ಹಠಾತ್ ಹದಗೆಟ್ಟು ಅವರು ಅಂತಿಮ ನಿಶ್ವಾಸ ತಾಳಿದ್ದಾರೆ. ಇದನ್ನೂ ಓದಿ: ಸುಳ್ಳೇ ಬಿಜೆಪಿಯವರ ಮನೆ ದೇವರು: ಸಿಎಂ ಸಿದ್ದು
ಹಿರಿಯ ನಟನ ಅಗಲಿಕೆ ಬಾಲಿವುಡ್ಗೆ, ಅಭಿಮಾನಿಗಳಿಗೆ, ಹಾಗೂ ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ.
