ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ ಅವರಿಗೆ ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
ಹೌದು, ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ಅವರು ವಿದೇಶಗಳಲ್ಲೂ ಅಭಿಮಾನಗಳ ಬಳಗ ಹೊಂದಿರುವ ಅವರು, ಇದೀಗ ಬಿಗ್ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿರುವ ಸಾಂಗ್ ಒಂದು ರಿಲೀಸ್ ಆಗಿದ್ದು ಸಖತ್ ಸ್ಟೆಪ್ ಹಾಕಿದ್ದನ್ನು ನೋಡಿ ಪ್ರಭಾಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ದಿ ರಾಜಾ ಸಾಬ್ ಸಿನಿಮಾವನ್ನ ನಿರ್ದೇಶಕ ಮಾರುತಿ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಬಿಡುಗಡೆಯಾದ ಪೋಸ್ಟರ್ಗಳು ಮತ್ತು ಟ್ರೇಲರ್ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್: ವಿಜಯಲಕ್ಷ್ಮಿ ಹೆಸರು ಬಾಯ್ಬಿಟ್ಟಿ ಧನ್ವೀರ್!
ಇಂದು ದಿ ರಾಜಾ ಸಾಬ್ ಚಿತ್ರದ ‘ರೆಬೆಲ್ ಸಾಂಗ್’ ಬಿಡುಗಡೆಯಾಗಿದೆ. ಹಾಡಿನಲ್ಲಿ ಪ್ಯಾನ್ ಇಂಡಿಯಾ ನಂಬರ್ 1, ರೆಬೆಲ್ ಸ್ಟಾರ್ ಎಂಬ ಪದಗಳನ್ನು ಬಳಸಿ ಅಭಿಮಾನಿಗಳ ಮನ ಸೆಳೆದಿದ್ದಾರೆ. ಹಾಡು ನೋಡಿದ ನೆಟ್ಟಿಗರು “ಸಿನಿಮಾ ಯಾವಾಗ ರಿಲೀಸ್ ಆಗುತ್ತೋ?” ಎಂದು ಕಾಯುವುದನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಬಹಳ ದಿನಗಳ ನಂತರ ಪವರ್ಫುಲ್ ಹಾಡಿನಲ್ಲಿ ಪ್ರಭಾಸ್ ಅವರನ್ನು ನೋಡುವ ಅವಕಾಶ ಸಿಕ್ಕಿರುವುದರಿಂದ ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
