ಬೆಂಗಳೂರು: ಬೆಂಗಳೂರು ನಗರದ ಡೈರಿ ಸರ್ಕಲ್ ಬಳಿ ಬ್ಯಾಂಕಿನ 7.11 ಕೋಟಿ ಎಟಿಎಂ ಹಣ ರಾಬರಿ ನಡೆದಿದ್ದು, ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಚಮತ್ಕಾರಕ್ಕೆ ಇದೀಗ ದರೋಡೆಯ 5.50 ಕೋಟಿ ನಗದು ಜಪ್ತಿ ಮಾಡಲಾಗಿದೆ.
ಯೆಸ್…ಸಿಎಂಎಸ್ ಎಟಿಎಂ ವಾಹನದ 7.11 ಕೋಟಿ ರೂ. ದರೋಡೆ ಪ್ರಕರಣದ ತನಿಖೆಯಲ್ಲಿ ಬೆಂಗಳೂರು ಪೊಲೀಸರು ಭಾರೀ ಮುನ್ನಡೆ ಸಾಧಿಸಿದ್ದಾರೆ. ರಾಬರಿ ಗ್ಯಾಂಗ್ನಿಂದ 5.50 ಕೋಟಿ ರೂ. ನಗದು ಜಪ್ತಿ ಮಾಡಿರುವ ಖಾಕಿಗಳು, ಮೂಟೆ ಮತ್ತು ಸೂಟ್ಕೇಸ್ನಲ್ಲಿ ಹಣವನ್ನು ಪೊಲೀಸ್ ಆಯುಕ್ತರ ಕಚೇರಿಗೆ ತರಿರುವ ದೃಶ್ಯಗಳು ಪ್ರಜಾವಾಹಿನಿಗೆ ಲಭ್ಯವಾಗಿದೆ. ಹಣದ ಭಾರಕ್ಕೆ ಪೊಲೀಸರು ಕೂಡ ಸುಸ್ತಾಗುವಷ್ಟು ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: 7 ಕೋಟಿ ರಾಬರಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ ವ್ಯಕ್ತಿ ಅರೆಸ್ಟ್
ಉಳಿದ ಮೊತ್ತ ಪತ್ತೆಗೆ 200ಕ್ಕೂ ಹೆಚ್ಚು ಸಿಬ್ಬಂದಿ ಸಕ್ರಿಯವಾಗಿದ್ದು, ಹಲವು ಬಲೆಗಳನ್ನು ಬೀಸಿ ಪೊಲೀಸರು ತನಿಖೆಯನ್ನು ಮತ್ತಷ್ಟು ವೇಗಗೊಳಿಸಿದ್ದಾರೆ. ಪ್ರಕರಣದ ಬಗ್ಗೆ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.
