ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಮಂತ್ರಿ ಮಾಲ್ ಗೆ ಆಗಾಗ ತೆರಿಗೆ ಇಲಾಖೆಗಳು ಹಾಗೂ ಈ ಮೊದಲು ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಬೀಗ ಜಡೆಯುತ್ತಿದ್ದರು. ಅದರಂತೆ ಮತ್ತೆ ಇದೀಗ ಮಂತ್ರಿ ಮಾಲ್ ಗೆ ಜಿಬಿಎ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಹೌದು, ಬಾಕಿ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ʼಗೆ ಮತ್ತೆ ಇಂದು ಜಿಬಿಎ ಅಧಿಕಾರಿಗಳು ಬೀಗ ಜಡೆದಿದ್ದಾರೆ. ಸುಮಾರು 30 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಜಿಬಿಎ ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಇದರಿಂದ ಮಾಲ್‌ನಲ್ಲಿರುವ ನೌಕರರು ಮತ್ತು ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.
ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ ಅಭಿಷೇಕ್ ಡೆವೆಲಪರ್ಸ್ ತಾರಿಗೆ ಅವರ ಒಡೆತನದ್ದಾಗಿದೆ. ಮಾಲ್ ಮಾಲೀಕರು ಜಿಬಿಎಗೆ ಕಟ್ಟಬೇಕಾಗಿರುವ ತೆರಿಗೆಯನ್ನ ಸರಿಯಾಗಿ ಪಾವತಿ ಮಾಡಿಲ್ಲ. 30 ಕೋಟಿ 81 ಲಕ್ಷದ 45 ಸಾವಿರದ 600 ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕಾರಣಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಕಿ ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ
ತೆರಿಗೆ ಪಾವತಿ ಬಗ್ಗೆ ಜಿಬಿಎ ಹಲವು ಬಾರಿ ನೋಟಿಸ್ ಕೊಟ್ಟಿದ್ರು ಮಂತ್ರಿ ಮಾಲ್ ಆಡಳಿತ ವರ್ಗ ಯಾವುದೇ ಪ್ರತಿಕ್ರಿ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿ ನೋಟಿಸ್ ಅಂಟಿಸಿದ್ದಾರೆ.
