ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು (ಮಂಗಳವಾರ ನವೆಂಬರ್ 18) ರಂದು ಹೆಚ್ಎಸ್ಆರ್ ಬಡಾವಣೆಯ 6ನೇ ಹಂತದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಡ್ರೈನೇಜ್ ಕಾಮಗಾರಿಗೆ ಸಂಬಂಧಿಸಿದ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಮಳೆಗಾಲದಲ್ಲಿ ದುರಸ್ತಿಗೊಂಡಿರುವ ಎಚ್ಎಸ್ಆರ್ ಬಡಾವಣೆಯ ಎಲ್ಲಾ ಡ್ರೈನೇಜ್ ಗಳು ಹಾಗೂ ರಸ್ತೆಗಳನ್ನು ಹಂತಹಂತವಾಗಿ ಪೂರ್ಣಗೊಳಿಸುವ ಮೂಲಕ ಮತ್ತೆ ಮಳೆಗಾಲ ಬಂದರು ಸಹ ಯಾವುದೇ ರೀತಿ ಹಾನಿ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಯಾರೇ ಏನೇ ಹೇಳಿದರೂ ಕೂಡ ಮಳೆ ನೀರು ಡ್ರೈನೇಜ್ಗೆ ಹೋಗುವ ಹಾಗೆ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ರಸ್ತೆಯನ್ನು ಹೈಟ್ ಮಾಡಿ ಕಾಂಕ್ರೀಟ್ ಹಾಕಬೇಕು ಎಂದು ಹೇಳಿದರು.
ಮಳೆ ಬಂದರೆ ಸಾಕು ಇಲ್ಲಿ ನಮಾಜ್ ಮಾಡಲು ನಮಗೆ ಹೋಗಲು ಆಗುವುದಿಲ್ಲ ಎಂದು ಸ್ಥಳೀಯರು ಹೇಳಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸತೀಶ್ ರೆಡ್ಡಿ ಅವರು, ಕ್ರಮೇಣವಾಗಿ ಎಲ್ಲಾ ರಸ್ತೆ ಕಾಮಗಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ ಹಾಗೆ ಇದಕ್ಕೂ ಕೂಡ ಜಲ್ಲಿ ಕಲ್ಲು ಹಾಕಿ ಕಾಂಕ್ರೀಟ್ ಹಾಕುವ ವ್ಯವಸ್ಥೆ ಮಾಡಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಆರೋಗ್ಯದಲ್ಲಿ ಏರುಪೇರು!
ಈ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಅಭಿಯಂತರಾದ ರಾಜು, ಸ್ಥಳೀಯ ಮುಖಂಡರುಗಳಾದ ಬಿ ಎನ್ ಆರ್ ರೆಡ್ಡಿ, ಚಂದ್ರಶೇಖರ್, ಗುಂಡು ತೋಪು ರವಿ, ಮುಖಂಡರಾದ ಲಕ್ಷ್ಮಣ್ ರೆಡ್ಡಿ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು.
