ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಾರ್ಕ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಖಡಕ್ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿರುವ ಕಿಚ್ಚ ಸುದೀಪ್ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಹೌದು, ಮಾರ್ಕ್ಸ್ ಸಿನಿಮಾದ ಟೀಸರ್ ನಿನ್ನೆ (ಶುಕ್ರವಾರ ನವಂಬರ್ 7) ರಂದು ರಿಲೀಸ್ ಆಗಿದ್ದು ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸುತ್ತಿರುವ ಕಿಚ್ಚ ಸುದೀಪ್ ನನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇನ್ನು ಹಿಂದೆ ಬಿಡುಗಡೆಯಾದ ‘ಸೈಕೋ ಸೈತಾನ್’ ಹಾಡು ಹಾಗೂ ಟೈಟಲ್ ಟೀಸರ್ ಎರಡೂ ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. ನವೆಂಬರ್ 7ರಂದು ಬಿಡುಗಡೆಯಾದ ಟೀಸರ್ನಲ್ಲಿ ಸುದೀಪ್ ಅವರ ತೀವ್ರ ನೋಟ, ಸಂಭಾಷಣೆ ಮತ್ತು ಆ್ಯಕ್ಷನ್ ಸನ್ನಿವೇಶಗಳು ಅಭಿಮಾನಿಗಳಿಗೆ ಸಂಪೂರ್ಣ ಥ್ರಿಲ್ ನೀಡಿವೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಡೇಟ್ ಫಿಕ್ಸ್!?
‘ಮಾರ್ಕ್’ ಚಿತ್ರ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಅಭಿಮಾನಿಗಳು ಈಗಾಗಲೇ ಈ ಚಿತ್ರವನ್ನು ಸುದೀಪ್ ಅವರ ಮತ್ತೊಂದು ಬ್ಲಾಕ್ಬಸ್ಟರ್ ಆಗಿ ನಿರೀಕ್ಷಿಸುತ್ತಿದ್ದಾರೆ.
